ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಪರಿಚಾರಕರ ಕುಟುಂಬಗಳ ಸಂಕಷ್ಟಕ್ಕೆ ಸರ್ಕಾರ ನೆರವು ನೀಡಲಿ

ಧಾರ್ಮಿಕ ದತ್ತಿ ಸಚಿವರಿಗೆ ಪತ್ರ ಬರೆದು ವಿನಂತಿಸಿದ ಧಾರ್ಮಿಕ ಪರಿಷತ್ತಿನ ಸದಸ್ಯರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ

ಬೆಳ್ತಂಗಡಿ : ಕೊರೊನಾ ವೈರಸ್ ಹರಡದಂತೆ ತಡೆಯಲು ದೇಶಾದ್ಯಂತ ಲಾಕ್ ಡೌನ್ ಘೋಷಣೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸಣ್ಣ ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅರ್ಚಕರು ಪರಿಚಾರಕರು, ಕೋಲ ನರ್ತಕರು, ದೈವ ಪಾತ್ರಿಗಳು , ವಾದ್ಯ ಬಳಗದವರು ಸಂಕಷ್ಟಕ್ಕೆ ಸಿಲುಕಿದ್ದರಿಂದ ರಾಜ್ಯ ಸರ್ಕಾರವು ಅವರ ನೆರವಿಗೆ ಬರಬೇಕೆಂದು ದಕ್ಷಿಣ ಕನ್ನಡ ಧಾರ್ಮಿಕ ಪರಿಷತ್ತಿನ ಸದಸ್ಯರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀ ನಿವಾಸ ಪೂಜಾರಿ ಅವರಿಗೆ ಪತ್ರ ಬರೆದು ವಿನಂತಿಸಿದ್ದಾರೆ.

ಕೊರೊನಾ ವೈರಸ್ ಹರಡದಂತೆ ಅದರ ನಿಯಂತ್ರಣಕ್ಕಾಗಿ ಜನರು ತಮ್ಮ ಕೆಲಸ ಕಾರ್ಯ, ವಹಿವಾಟುಗಳನ್ನೆಲ್ಲಾ ನಿಲ್ಲಿಸಿ ಮನೆಯಲ್ಲಿ ಕುಳಿತು ಸರಕಾರದ ನಿಯಮಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಇದರಿಂದಾಗಿ ಪ್ರತಿನಿತ್ಯ ದುಡಿದು ಸಂಪಾದಿಸುವವರಿಗೆ ಬಹಳಷ್ಟು ತೊಂದರೆ ಉಂಟಾಗಿದೆ. ಅದರಲ್ಲೂ ಮುಖ್ಯವಾಗಿ ತಮ್ಮ ಜೀವನ ನಡೆಸಲು ಬಹಳ ಕಷ್ಟ ಪಡುತ್ತಿದ್ದಾರೆ .

ಭೂತರಾಧನೆ ಸೇರಿದಂತೆ ತುಳುನಾಡಿನ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗುವ ಈ ಸಮಯದಲ್ಲಿ ಲಾಕ್ ಡೌನ್ ನಿಂದಾಗಿ ಅವರು ಈ ಸಮಯದಲ್ಲಿ ಸಂಪಾದಿಸಿದ ಹಣದಲ್ಲಿ ಇವರ ಕುಟುಂಬಗಳು ವರ್ಷ ಪೂರ್ತಿ ದಿನ ಸಾಗಿಸಬೇಕಾಗಿದೆ. ಹೀಗಿರುವಾಗ ಅವರಿಗೆ ಈ ಸಮಯದಲ್ಲಿ ಆದ ನಷ್ಟ ಪೂರ್ತಿ ವರ್ಷ ಅನುಭವಿಸಬೇಕಾದ್ದರಿಂದ ಅಂತವರ ಸಹಾಯಕ್ಕೆ ಸರ್ಕಾರ ನಿಲ್ಲಬೇಕು ಎಂದು ಪತ್ರದಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.

ಸರಕಾರದ ಮುಜರಾಯಿ ಇಲಾಖೆಯ ವತಿಯಿಂದ ಇಂತಹ ಮಂದಿಗಳಿಗೆ ಸಹಾಯ ಮಾಡಿ ಅವರ ಜೀವನ ಸಾಗಿಸಲು ನೆರವು ನೀಡಬೇಕಾಗಿ ದೇವೇಂದ್ರ ಹೆಗ್ಡೆ ವಿನಮ್ರವಾಗಿ ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.