ಗೇರುಕಟ್ಟೆ ಬಳಿಯ ರಬ್ಬರ್ ತೋಟದಲ್ಲಿ ಆಕಸ್ಮಿಕ ಬೆಂಕಿ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ತಾಲೂಕಿನ ಗೇರುಕಟ್ಟೆ ಬಳಿಯ ಕೇಂಬರ್ಜೆ ಎಂಬಲ್ಲಿ ರಬ್ಬರ್ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹಾನಿಯುಂಟಾಗಿದೆ.

ಸ್ಥಳೀಯ ನಿವಾಸಿಯಾದ ಸಂಜೀವ ಅವರ ಐದು ಎಕರೆ ವಿಸ್ತೀರ್ಣದ ರಬ್ಬರ್ ತೋಟದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತು. ಈ ವಿಷಯ ತಿಳಿದು ಅಲ್ಲಿನ ಸ್ಥಳೀಯರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರೂ ಅಗ್ನಿ ಹತೋಟಿಗೆ ಬಾರದ್ದರಿಂದ ಅಗ್ನಿಶಾಮಕ ದಳಕ್ಕೆ ತಿಳಿಸಲಾಯಿತು.


ಆ ನಂತರ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ ಹೆಚ್ಚಿನ ಅಗ್ನಿ ಅನಾಹುತ ಸಂಭವಿಸದಂತೆ ಬೆಂಕಿಯ ಹತೋಟಿಗೆ ತಂದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.