‌ಗೇರುಕಟ್ಟೆ ಅನಗತ್ಯ ಓಡಾಟ ವಾಹನಗಳು ಪೊಲೀಸ್‌ ವಶಕ್ಕೆ

ಗೇರುಕಟ್ಟೆ : ಲಾಕ್ ಡೌನ್ ಹಿನ್ನೆಲೆಯಲ್ಲಿ ಅನಗತ್ಯವಾಗಿ ಪೇಟೆಯಲ್ಲಿ ಓಡಾಟ ಮಾಡುತ್ತಿದ್ದ ವಾಹನಗಳನ್ನು ಬೆಳ್ತಂಗಡಿ ಪೊಲೀಸರು ವಶ ಪಡಿಸಿ ಬಿಸಿ ಮುಟ್ಟಿಸಿದ ಘಟನೆ ಎ.9 ರಂದು ನಡೆಯಿತು.

ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದ್ದು ದಕ್ಷಿಣ ಕನ್ನಡ ಜಿಲ್ಲೆಯೂ ಆದೇಶವನ್ನು ಕಟ್ಟುನಿಟ್ಟಾಗಿ ಪಾವತಿಸಬೇಕಾಗುತ್ತದೆ. ಈ ಆದೇಶವನ್ನು ಧಿಕ್ಕರಿಸಿ ಅನಗತ್ಯವಾಗಿ ತಿರುಗಾಡುವ ವಾಹನಗಳನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದು ಠಾಣೆಗೆ ಕೊಂಡೊಯ್ದ ದಂಡ ವಿಧಿಸಿದರು.ನಂತರ ವಾಹನ ಮಾಲೀಕರು ಠಾಣೆಯಲ್ಲಿ ದಂಡ ಪಾವತಿಸಿ ವಾಹನ ಪಡೆದು ಕೊಂಡರು. ಸರಕಾರದ ಕಾನೂನನ್ನು ಪಾಲಿಸುವುದಾಗಿ ಈ ಸಂದರ್ಭದಲ್ಲಿ ಒಪ್ಪಿಕೊಂಡರು.

ಬೆಳ್ತಂಗಡಿ ರಾಣಾ ವೃತ್ತ ನಿರೀಕ್ಷಕ ಸಂದೇಶ್ ಪಿ.ಜೆ ಆದೇಶ ದಂತೆ ಠಾಣೆಯ ಎಸ್.ಐ.ನಂದ ಕುಮಾರ್ ಎಂ.ಎಂ. ಮಾರ್ಗದಲ್ಲಿ ಎ.ಎಸ್.ಐ.ತಿಲಕ್ ಹಾಗೂ ರಾಮಯ್ಯ ಹೆಗ್ಡೆ,ಕಳಿಯ ಬೀಟ್ ಪೊಲೀಸ್ ಮಾಲತೇಶ್ ಮತ್ತುಸಿಬ್ಬಂದಿಗಳು ಪಾಲ್ಗೊಂಡಿದ್ದರು.
ವರದಿ. ಕೆ.ಎನ್.ಗೌಡ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.