ತಣ್ಣೀರುಪಂತ ಗ್ರಾ.ಪಂ.ಗೆ ವಿವಿಧ ಸಂಘ-ಸಂಸ್ಥೆಗಳಿಂದ ರೂ.57 ಸಾವಿರ ನೆರವು

  • ಕರಾಯ, ತಣ್ಣೀರುಪಂತ ಗ್ರಾಮಗಳ 6 ವಾರ್ಡ್‍ಗಳ 150 ಕುಟುಂಬಕ್ಕೆ ಅಕ್ಕಿ ವಿತರಣೆ

ಕಲ್ಲೇರಿ: ತಣ್ಣೀರುಪಂತ ಗ್ರಾಮ ಪಂಚಾಯತ್ ಸದಸ್ಯರು ಸೇರಿದಂತೆ ವಿವಿಧ ಸಂಘ- ಸಂಸ್ಥೆಗಳ ದಾನಿಗಳಿಂದ ಪಡೆದ ರೂ.57 ಸಾವಿರದಿಂದ ನೆರವಿನಿಂದ ಕರಾಯ ಮತ್ತು ತಣ್ಣೀರುಪಂತ ಗ್ರಾಮಗಳ 6 ವಾರ್ಡ್‍ಗಳ 150 ಅರ್ಹ ಬಡ ಕುಟುಂಬಗಳಿಗೆ ಅಕ್ಕಿ ವಿತರಿಸಲಾಯಿತು.

ಕಲ್ಲೇರಿಯ ಗ್ರಾಮ ಪಂಚಾಯತ್‍ನಲ್ಲಿ ಎ.9ರಂದು ತಣ್ಣೀರುಪಂತ ಗ್ರಾಮ ಪಂಚಾಯತ್‍ನ ಸದಸ್ಯರಿಂದ ರೂ.25 ಸಾವಿರ, ತಣ್ಣೀರುಪಂತ ಸಿ.ಎ ಬ್ಯಾಂಕ್‍ನಿಂದ 10 ಸಾವಿರ ರೂ., ತಣ್ಣೀರುಪಂತ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ರೂ.10 ಸಾವಿರ., ಕರಾಯ ಮೂರ್ತೆದಾರರ ಸೇವಾ ಸಂಘದಿಂದ ರೂ.6 ಸಾವಿರ, ಕರಾಯ ಶ್ರೀ ಕೃಷ್ಣ ಭಜನಾ ಮಂಡಳಿಯಿಂದ 3 ಸಾವಿರ, ಕಲ್ಲೇರಿ ನವಚೇತನ ರೈತ ಉತ್ಪಾದಕ ಸಂಘದಿಂದ 3 ಸಾವಿರ ರೂಪಾಯಿಗಳನ್ನು ಸಂಗ್ರಹಿಸಿ ಕರಾಯ ಮತ್ತು ತಣ್ಣೀರುಪಂತ ಗ್ರಾಮಗಳಲ್ಲಿನ 6 ವಾರ್ಡ್‍ಗೆ ತಲಾ 20 ಮಂದಿಯಂತೆ ಒಟ್ಟು 150 ಅರ್ಹ ಬಡ ಕುಟುಂಬಗಳಿಗೆ ತಲಾ 10 ಕೆಜಿ ಅಕ್ಕಿ ವಿತರಣೆ ಮಾಡಿದರು.

ಅಕ್ಕಿ ಅಥವಾ ನಗದು ನೀಡುವ ದಾನಿಗಳಿದ್ದರೆ ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ಜಯವಿಕ್ರಮರನ್ನು ಸಂಪರ್ಕಿಸಲು ಗ್ರಾ.ಪಂ. ವಿನಂತಿಸಿಕೊಂಡಿದೆ.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಜಯವಿಕ್ರಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಸದಸ್ಯರಾದ ಐಬೂ, ತಾಜುದ್ದೀನ್, ನವೀನ್‍ಕುಮಾರ್, ತಣ್ಣೀರುಪಂತ ಸೊಸೈಟಿ ಹಾಗೂ ಹಾಲು ಉತ್ಪಾದಕರ ಸೊಸೈಟಿಯ ಅಧ್ಯಕ್ಷರಾದ ನಿರಂಜನ್ ಬಾವಂತಬೆಟ್ಟು, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಸುರೇಂದ್ರ ಭಟ್, ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಜಯರಾಜ್, ಕರಾಯ ಮೂರ್ತೆದಾರರ ಸೇವಾ ಸಂಘದ ಅಧ್ಯಕ್ಷ ಜನಾರ್ದನ್ ಪೂಜಾರಿ, ಕರಾಯ ಶ್ರೀ ಕೃಷ್ಣ ಭಜನಾ ಮಂಡಳಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಕಲ್ಲೇರಿ ನವಚೇತನ ರೈತ ಉತ್ಪಾದಕ ಸಂಘ ಅಧ್ಯಕ್ಷ ದುಗ್ಗಪ್ಪ ಗೌಡ ಮತ್ತು ಸ್ವಯಂ ಸೇವಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.