ಕೃಷಿಕನಿಗೆ ಮಾಹಿತಿ ನೀಡದೆ 40 ರಬ್ಬರ್ ಮರ ಕಡಿದ ಹಿರಿಯಡ್ಕ ಮೆಸ್ಕಾಂ ಇಲಾಖೆ

Advt_NewsUnder_1
Advt_NewsUnder_1

ಕೃಷಿಕನಿಗೆ ಮಾಹಿತಿ ನೀಡದೆ 40 ರಬ್ಬರ್ ಮರ ಕಡಿದ ಹಿರಿಯಡ್ಕ ಮೆಸ್ಕಾಂ ಇಲಾಖೆ

ರಬ್ಬರ್ ಮರವೊಂದರ ಕೊಂಬೆಯೊಂದು ವಿದ್ಯುತ್ ತಂತಿಗೆ ಸ್ಪರ್ಶಿಸುತ್ತದೆ ಎಂಬ ನೆಪದಲ್ಲಿ 40 ರಬ್ಬರ್ ಮರಗಳನ್ನು ಯಾವುದೇ ಮಾಹಿತಿ ನೀಡದೆ ಕೆಪಿಟಿಸಿಎಲ್ ಸಂಸ್ಥೆಯ ಸಿಬ್ಬಂದಿಗಳು ಕಡಿದು ಹಾಕಿದ ಅಮಾನವೀಯ ಘಟನೆ ನಾರಾವಿ ಗ್ರಾಮದಿಂದ ವರದಿಯಾಗಿದೆ.

 ನಾರಾವಿ ಗ್ರಾಮದ ಭೂತಗುಡ್ಡೆ ಎಂಬಲ್ಲಿ ಎನ್ ಶ್ರೀನಿವಾಸ್ ವಿ ಕಿಣಿ ಎಂಬವರಿಗೆ ಸೇರಿದ ಸ.ನಂ 456 ರಲ್ಲಿ 3.22 ಎಕರೆ ಜಮೀನಿನಲ್ಲಿ ಫಲವತ್ತಾದ ರಬ್ಬರ್ ಕೃಷಿ ಮಾಡಿದ್ದರು. ನಿನ್ನೆ ಏಕಾಏಕಿ ಕೆಪಿಟಿಸಿಎಲ್ ಹಿರಿಯಡ್ಕ ಶಾಖೆಯ ಸಿಬ್ಬಂದಿಗಳು ಅಕ್ರಮ ಪ್ರವೇಶಗೈದು 15 ವರ್ಷ ಪ್ರಾಯದ 40 ಮರಗಳನ್ನು ಯಾವುದೇ ಮಾಹಿತಿ ನೀಡದೆ ಕಡಿದುರುಳಿಸಲಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಜನರನ್ನು ನಿಯಂತ್ರಿಸಿ ರೈತರು ಕಷ್ಟಪಟ್ಟು ಬೆಳೆದ ಕೃಷಿಯನ್ನು ಈ ರೀತಿ ನಾಶ ಮಾಡಿದರೆ ಹೇಗೆ ಎಂದು ಶ್ರೀನಿವಾಸ್ ಕಿಣಿ ಪ್ರಶ್ನಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.