ಮಗುವಿಗೆ ಅಗತ್ಯವಿರುವ ಔಷಧಗಳ ತಲುಪಿಸಿದ “ಸುದ್ದಿ ಸಹಾಯವಾಣಿ”

ಮಿತ್ತಬಾಗಿಲು ಗ್ರಾಮ ಪಂಚಾಯತ್ ಕಾರ್ಯಪಡೆಗೆ ಔಷಧ ಹಸ್ತಾಂತರ

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಿಸಿದ್ದರಿಂದ ಜನರ ಸಮಸ್ಯೆ, ಬೇಡಿಕೆಗಳಿಗೆ ಸ್ಪಂದಿಸಲು ‘ಸುದ್ದಿ ಸಹಾಯವಾಣಿ’ಯು ಗ್ರಾಮ ಪಂಚಾಯತ್ ಕಾರ್ಯಪಡೆ ಮೂಲಕ ಅಗತ್ಯ ಸಾಮಾಗ್ರಿಗಳನ್ನು ಸಂಬಂಧಪಟ್ಟವರಿಗೆ ನೀಡಲು ಮುಂದಾಗಿದೆ.

ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದ ಸುದ್ದಿ ಸಹಾಯವಾಣಿಯು ಎ.9ರಂದು ತಾಲೂಕಿನ ಮಲವಂತಿಗೆ ಗ್ರಾಮದ ತಂಗೆತ್ತಿಪಾಲು ಗೀತಾಂಜಲಿ ಅವರ ಕುಟುಂಬದ ಮಗುವಿಗೆ ಉಜಿರೆಯ ಮೆಡಿಕಲ್‍ನಿಂದ ಅಗತ್ಯವಾದ ಔಷಧಗಳ ಸಾಮಾಗ್ರಿಗಳನ್ನು ಪಡೆದ ಸುದ್ದಿ ಸಹಾಯವಾಣಿ ಪ್ರತಿನಿಧಿ ಈಶ್ವರ್ ಅವರು ಮಿತ್ತಬಾಗಿಲು ಗ್ರಾಮ ಪಂಚಾಯತ್‍ನ ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ಹಾಗೂ ಕಾರ್ಯಪಡೆಯ ಸ್ವಯಂಸೇವಕ ಸಂದೀಪ್, ಸಿಬ್ಬಂದಿ ಸುಂದರ ಅವರಿಗೆ ಹಸ್ತಾಂತರಿಸಿದರು.

ಸುದ್ದಿ ಸಹಾಯವಾಣಿ ಹೇಗೆ ಸಹಾಯಕವಾಯ್ತು?
ಮಲವಂತಿಗೆ ಗ್ರಾಮದಲ್ಲಿರುವ ಪತ್ನಿ ಗೀತಾಂಜಲಿ ಔಷಧಗಳ ಬೇಡಿಕೆ ಇಟ್ಟಿದ್ದರಿಂದ ನಿಡ್ಲೆ ಗ್ರಾಮದಲ್ಲಿನ ಪತಿ ಗಂಗಾಧರ ಗೌಡ ಅವರು ಸುದ್ದಿ ಸಹಾಯವಾಣಿ ಪ್ರತಿನಿಧಿಯಾದ ತಿಮ್ಮಪ್ಪ ಅವರಿಗೆ ಕರೆ ಮಾಡಿದ್ದರು. ಇದರಿಂದ ಕಾರ್ಯಪ್ರವೃತ್ತರಾದ ತಿಮ್ಮಪ್ಪ ಅವರು ಮಲವಂತಿಗೆ ಭಾಗದ ಮತ್ತೊಬ್ಬ ಸುದ್ದಿ ಸಹಾಯವಾಣಿ ಪ್ರತಿನಿಧಿಯಾದ ಈಶ್ವರ್ ಅವರಿಗೆ ಮಾಹಿತಿ ನೀಡಿದರು. ಆ ನಂತರ ಈಶ್ವರ್ ಅವರು ಬೆಳ್ತಂಗಡಿಯಿಂದ 24 ಕಿ.ಮೀ.ದೂರದಲ್ಲಿರುವ ಮಿತ್ತಬಾಗಿಲು ಗ್ರಾಮ ಪಂಚಾಯತ್ ಕಾರ್ಯಪಡೆಗೆ ಸುದ್ದಿ ಸಹಾಯವಾಣಿ ಪ್ರತಿನಿಧಿ ಔಷಧಗಳನ್ನು ತಲುಪಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.