HomePage_Banner_
HomePage_Banner_

ಶಿರ್ಲಾಲು:ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

ಶಿರ್ಲಾಲು: ಶಿರ್ಲಾಲು _ಕರಂಬಾರು ಗ್ರಾಮದ ಜನಸ್ನೇಹಿ ಬೀಟ್ ಪೊಲೀಸ್ ಅಭಿಜಿತ್ ಕುಮಾರ್ ಅವರ ಮುಂದಾಳತ್ವದಲ್ಲಿ ಗ್ರಾಮ GB ಪಂಚಾಯತ್ ನೌಕರರ ಸಹಕಾರದೊಂದಿಗೆ ಗ್ರಾಮದ ಸಮಾನಮನಸ್ಕರ ನೆರವಿನೊಂದಿಗೆ ರಚನೆಯಾದ“ಹಸಿವು ಮುಕ್ತ ಗ್ರಾಮ ಕ್ಕಾಗಿ  ವಾಟ್ಸಪ್ ಗ್ರೂಪ್ ಮೂಲಕ ಆಹಾರ ಸಾಮಗ್ರಿಗಳ ಕಿಟ್ ವಿತರಿಸಲಾಯಿತು.


ಶಿರ್ಲಾಲು ಹಾಗೂ ಕರಂಬಾರು ಗ್ರಾಮದ ದಾನಿಗಳ ನೆರವಿನ ಮುಖಾಂತರ ಸಂಗ್ರಹಿಸಲಾದ ಅಕ್ಕಿ ಹಾಗೂ ಇನ್ನಿತರ ಅಗತ್ಯ ದಿನಸಿಗಳನ್ನು ಗುರುತಿಸಲಾದ ಅಶಕ್ತ ಕುಟುಂಬಗಳಿಗೆ ವೇಣೂರು ಪೊಲೀಸ್ ಠಾಣಾ ಉಪನಿರೀಕ್ಷಕ ಲೋಲಾಕ್ಷ ಕೆ ರವರು ಗ್ರಾಮದಲ್ಲಿ ಚಾಲನೆ ನೀಡಿದ್ದು ಶಿರ್ಲಾಲು ಕರಂಬಾರು ಗ್ರಾಮದಲ್ಲಿ ವಾಸಿಸುತ್ತಿರುವ ಒಂಟಿ ಮಹಿಳೆ , ಅಂಗವಿಕಲರಿಗೆ, ವಯೋವೃದ್ಧರು , ಅನಾರೋಗ್ಯಪೀಡಿತರಾದವರಿಗೆ ಹಾಗೂ ಶಿರ್ಲಾಲು ಗ್ರಾಮದ ನಕ್ಸಲ್ ಬಾಧಿತ ಪ್ರದೇಶದಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಗುರುತಿಸಿ ವಿತರಿಸಲಾಯಿತು.

ಈಗಾಗಲೇ ದಾನಿಗಳ ನೆರವಿನಿಂದ 30 ಕಿಂಟ್ವಾಲ್ ಅಕ್ಕಿ ಬಂದಿದ್ದು 100 ಅಶಕ್ತ ಕುಟುಂಬಗಳಿಗೆ ನೀಡಲಿದ್ದು ಇವತ್ತು 30 ಕುಟುಂಬಗಳಿಗೆ ತಲಾ 10 ಕಜಿಯಂತೆ ವಿತರಿಸಲಾಯಿತು..


ಈ ಸಂದರ್ಭದಲ್ಲಿ ಬೀಟ್ ಪೊಲೀಸ್ ಅಭಿಜಿತ್ ಕುಮಾರ್ , ಶಿರ್ಲಾಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜ್ , ಬಿಲ್ ಕಲೆಕ್ಟರ್ ಸುಪ್ರೀತಾ ಗ್ರಾಮದ ಆರೋಗ್ಯ ಸಹಾಯಕಿ ಜಯಲಕ್ಷ್ಮಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.