ಧರ್ಮಸ್ಥಳ: ಕೊರೊನಾ ಲಾಕ್ಡೌನ್ ಸಂದರ್ಭ ಯಾವುದೇ ಜಾತಿ ಧರ್ಮವನ್ನು ಗುರಿಯಾಗಿಸಿ ಸುಳ್ಳು, ಪ್ರಚೋದನಕಾರಿ ಮತ್ತು ಧರ್ಮನಿಂದನೆಯ ಸ್ಟೇಟಸ್ಗಳನ್ನಾಗಲೀ, ಪೋಸ್ಟ್ಗಳನ್ನಾಗಲೀ ಹಾಕದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶ ನೀಡಿದ್ದರೂ ಅದನ್ನು ಮೀರಿದ್ದಕ್ಕಾಗಿ ಧರ್ಮಸ್ಥಳ ಠಾಣೆಯಲ್ಲಿ 6 ಮಂದಿಯ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ.
ಮುರಳೀಧರ ಉಜಿರೆ ಮಾಚಾರು, ವಿಜಯ, ಸುಧೀರ್ ಕುಮಾರ್, ಅಮೃತ್ರಾಜ್, ಅರವಿಂದ ಯಾನೆ ಅವಿನಾಶ್ ಚಿಬಿದ್ರೆ ಮತ್ತು ಸುಧಾಕರ ಗೌಡ ಧರ್ಮಸ್ಥಳ ಅವರ ವಿರುದ್ಧ ಬಂದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವರ ವಿರುದ್ಧ ಅಹಮದ್ ಕಬೀರ್, ಅಬ್ದುಲ್ ರಝಾಕ್ ಬೀಟಿಗೆ, ಮುಹಮ್ಮದ್ ಅಝಾದ್ ಮತ್ತು ಮುಹಮ್ಮದ್ ಅಶ್ಪಾಕ್ ಕಕ್ಕೆಜಾಲು ಇವರು ಪ್ರತ್ಯೇಕ ದೂರುಗಳನ್ನು ನೀಡಿದ್ದರು.
ದೂರಿನ ಜೊತೆಗೆ ಧರ್ಮನಿಂದನೆ ಮಾಡಿದ ಪೋಸ್ಟ್ಗಳ ಮುದ್ರಿತ ಪ್ರತಿಗಳನ್ನೂ ಲಗತ್ತಿಸಿ ನೀಡಿದ್ದರು.