ರೋಟರಿ ಕ್ಲಬ್‍ನಿಂದ ಮೆಸ್ಕಾಂ ಲೈನ್‍ಮ್ಯಾನ್‍ಗಳಿಗೆ ಮಾಸ್ಕ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಮೆಸ್ಕಾಂ ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯ ಲೈನ್‍ಮ್ಯಾನ್‍ಗಳಿಗೆ ಮಾಸ್ಕ್‍ಗಳನ್ನು ಉಚಿತವಾಗಿ ವಿತರಿಸಲಾಯಿತು.

ಬೆಳ್ತಂಗಡಿಯ ಮೆಸ್ಕಾಂ ಉಪವಿಭಾಗದ ಕಾರ್ಯಾಲಯದ ಎದುರು ಎ.8ರಂದು ರೋಟರಿ ಕ್ಲಬ್ ಅಧ್ಯಕ್ಷ ಜಯರಾಮ್ ಅವರು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಶಂಕರ್ ಅವರಿಗೆ ಮಾಸ್ಕ್‍ಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ನ್ಯಾಯವಾದಿ ರೊ| ಬಿ.ಕೆ ಧನಂಜಯರಾವ್, ರೊ| ದಯಾನಂದ ನಾಯಕ್, ರೊ| ವೈಕುಂಠ ಪ್ರಭು, ರೊ| ಪ್ರಕಾಶ್ ತುಳುಪುಳೆ, ರೊ| ಯಶವಂತ ಪಟವರ್ಧನ್, ರೊ| ಶ್ರೀಕೃಷ್ಣ ಭಟ್ ಕಾಂತಾಜೆ, ಸ್ಕೌಟ್ ಗೈಡ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಪ್ರಮೀಳಾ, ಅಜಿತ್, ಶ್ರವಣ್ ಕಾಂತಾಜೆ ಹಾಗೂ ಮೆಸ್ಕಾಂ ಬೆಳ್ತಂಗಡಿ ಉಪ ವಿಭಾಗದ ಲೈನ್‍ಮ್ಯಾನ್‍ಗಳು, ಸಿಬ್ಬಂದಿಗಳು ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.