ಯುವವೇದಿಕೆ ಮುಗೇರಡ್ಕದಿಂದ 75 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

ಮೊಗ್ರು: ಯುವ ವೇದಿಕೆ ಮುಗೇರಡ್ಕ ಮೊಗ್ರು ಇದರ ವತಿಯಿಂದ ಕೊರೊನಾ (ಕೋವಿಡ್-19) ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ಅನೇಕ ಮಂದಿ ಬಡವರು ಸಮಸ್ಯೆಗೆ ಸಿಲುಕಿದ್ದು, ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಜನರು ಅಗತ್ಯ ಆಹಾರ ವಸ್ತುಗಳು ದೊರೆಯದೆ ಸಂಕಷ್ಟಕ್ಕೀಡಾಗಬಾರದು ಎನ್ನುವ ಉದ್ದೇಶದಿಂದ ದಿನ ಬಳಕೆ ಆಹಾರವಸ್ತುಗಳ ಕಿಟ್‍ಗಳನ್ನು ಕಷ್ಟದಲ್ಲಿರುವ 75 ಕುಟುಂಬಗಳಿಗೆ ಎ.7ರಂದು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ, ನ್ಯಾಯವಾದಿ ಉದಯ ಬಿ.ಕೆ, ಶಿವಪ್ರಸಾದ್ ಪಿಂಡಿಮನೆ ಸಂಚಾರಿ ಠಾಣೆ ಪುತ್ತೂರು, ಗುಣಪಾಲ ಜಲ್ನಾಡೆ ತರಬೇತಿ ಪಿ.ಎಸ್.ಐ ಉಪ್ಪಿನಂಗಡಿ, ಬೆಳ್ತಂಗಡಿ ಭೂ ಅಭಿವೃದ್ಧಿ ಬ್ಯಾಂಕ್ ಮಾಜಿ ಅಧ್ಯಕ್ಷ ಈಶ್ವರ ಭಟ್ ಮಲ್ತೋಡಿ, ಯುವವೇದಿಕೆ ಮುಗೇರಡ್ಕದ ಗೌರವಾಧ್ಯಕ್ಷ ಕೇಶವ ಗೌಡ ಅಶೋಕ ನಿಯಲ, ಅಧ್ಯಕ್ಷ ಆನಂದ ಗೌಡ ಮೊಗ್ರು, ಕಾರ್ಯದರ್ಶಿ ಮೇದಪ್ಪ ಗೌಡ, ಕೋಶಾಧಿಕಾರಿ ದೀಕ್ಷಿತ್ ಮತ್ತು ಅಶ್ವತ್ಥ್ ಹಾಗೂ ಸರ್ವ ಸದಸ್ಯರು ಸಂಪೂರ್ಣ ಸಹಕರಿಸಿದರು.

ಈ ಪುಣ್ಯ ಕಾರ್ಯಕ್ಕೆ ಜಾತಿ, ಭೇದ ಮರೆತು ಆರ್ಥಿಕ ಸಹಾಯವನ್ನು ಊರಿನ ಹಾಗೂ ಪರವೂರಿನ ನಾಗರಿಕ ಬಂಧುಗಳು ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.