ಜೈನ್‍ಪೇಟೆ ಬಳಿ ಸ್ನಾನಗೃಹಕ್ಕೆ ಆಕಸ್ಮಿಕ ಬೆಂಕಿ ಸ್ಥಳಕ್ಕೆ ಭೇಟಿ ನೀಡಿದ ನಗರ ಪಂಚಾಯತ್ ಸದಸ್ಯರು, ಗ್ರಾಮಕರಣಿಕ

ಬೆಳ್ತಂಗಡಿ: ಇಲ್ಲಿನ ಜೈನ್‍ಪೇಟೆ ಹತ್ತಿರ ಬಂಟರ ಭವನದ ಹಿಂಭಾಗದಲ್ಲಿ ವಾಸಿಸುವ ನಿವಾಸಿ ಕೃಷ್ಣಪ್ಪ ಮೂಲ್ಯ ಅವರ ಮನೆಯ ಸ್ನಾನಗೃಹಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಗೆ ಹಾನಿಯಾಗಿ ಅಂದಾಜು 20 ಸಾವಿರ ರೂ.ನಷ್ಟ ಉಂಟಾಗಿದೆ.


ಎ.7ರಂದು ಸಂಜೆ ಸ್ನಾನಕ್ಕಾಗಿ ಬಿಸಿನೀರಿನ ತಯಾರಿಯಲ್ಲಿ ತೊಡಗಿರುವಾಗ ಆಕಸ್ಮಿಕವಾಗಿ ತೆಂಗಿನಗರಿ ಹಾಗೂ ಒಣಹುಲ್ಲಿಗೆ ಬೆಂಕಿ ತಗುಲಿ ಮನೆಯ ಆವರಣಗಳಿಗೆ ವ್ಯಾಪಿಸಿ ಮೇಲ್ಬಾಗದ ಸಿಮೆಂಟ್ ಶೀಟ್‍ಗಳಿಗೆ ಹಾನಿಯಾಗಿದೆ. ಇನ್ನು ಹೆಚ್ಚಿನ ಅಗ್ನಿ ಅನಾಹುತವಾಗುವುದನ್ನು ತಪ್ಪಿಸಲು ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಬಂದು ಬೆಂಕಿ ಆರಿಸಿದ್ದಾರೆ. ಈ ಆಕಸ್ಮಿಕ ಬೆಂಕಿಗೆ ಕೃಷ್ಣಪ್ಪ ಅವರ ಪತ್ನಿ ಸರೋಜಿನಿ ಅವರ ಕೈಗಳಿಗೆ ಗಾಯವಾಗಿದ್ದು ಅವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಂಕಿ ಅನಾಹುತವಾದ ಮನೆಯ ಸ್ಥಳಕ್ಕೆ ಎ.8ರಂದು ಬೆಳಗ್ಗೆ ಪಟ್ಟಣ ಪಂಚಾಯತ್ ಸದಸ್ಯರಾದ ಜಯಾನಂದ ಗೌಡ ಅವರೊಂದಿಗೆ ಗ್ರಾಮ ಕರಣಿಕ ನಾರಾಯಣ ಕುಲಾಲ್ ಆಗಮಿಸಿ ಮನೆಗೆ ಆದ ನಷ್ಟದ ಅಂದಾಜುಗಳನ್ನು ಪರಿಶೀಲಿಸಿದರು. ಸ್ಥಳೀಯರಾದ ಕಿರಣ್‍ಕುಮಾರ್ ಶೆಟ್ಟಿ, ನವೀನ್ ಶೆಟ್ಟಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.