ಹೊಸಂಗಡಿ ಪ್ರೆಂಡ್ಸ್ ಕ್ಲಬ್ ನಿಂದ ಸುಮಾರು 150 ಕುಟುಂಬಗಳಿಗೆ ದಿನಸಿ ಸಾಮಾನುಗಳ ವಿತರಣೆ

ಹೊಸಂಗಡಿ: ರಾಜ್ಯದ ಅತ್ಯುತ್ತಮ ಸೇವಾ ಸಂಘ ಎಂದು ಪ್ರಶಸ್ತಿ ಪಡೆದ ಪ್ರೆಂಡ್ಸ್ ಕ್ಲಬ್ ಹೊಸಂಗಡಿ ಪ್ರತಿ ವರ್ಷವೂ ಹತ್ತು ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದು, ಪ್ರಸ್ತುತ ಸಮಯದಲ್ಲಿ ಕೊರೊನ ವೈರಸ್ ನಿಂದ ಇಡಿ ಲೋಕವೇ ತತ್ತರಿಸಿ ಹೊಗಿದ್ದು ಬಡಬಗ್ಗರಿಗೆ ಏನಾದರು ಸಹಾಯ ಮಾಡಬೇಕೆಂಬ ಉದ್ದೇಶದಿಂದ ಈ ಆಹಾರ ಸಾಮಾಗ್ರಿ ಕಿಟ್ ಯೋಜನೆಯನ್ನು ಹಾಕ್ಕಿದ್ದು ಪ್ರೆಂಡ್ಸ್ ಕ್ಲಬ್ ಸದಸ್ಯರು, ಊರಿನ ಹೊರ ರಾಜ್ಯದಲ್ಲಿರುವ ಮುಂಬಾಯಿ, ಬರೊಡ ಹಾಗು ಇನ್ನಿತ್ತರ ಸ್ಥಳಗಳ ಊರಿನ ದಾನಿಗಳಿಂದ ಹಣ ಸಂಗ್ರಹ ಮಾಡಿ ಸುಮಾರು 150 ಕುಟುಂಭಗಳಿಗೆ ದಿನಾ ಉಪಯೊಗಿಸುವ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.


ಜಿ.ಪಂ ಸದಸ್ಯ ಹಾಗು ಫ಼್ರೆಂಡ್ಸ್ ಕ್ಲಬ್ ಗೌರವಾದ್ಯಕ್ಷ ಧರಣೇಂದ್ರ ಕುಮಾರ್ ಸಾಮಾಗ್ರಿಗಳನ್ನು ವಿತರಿಸಿ ಮುಂದೆಯೂ ಪಂಚಾಯತ್ ಹಾಗು ದಾನಿಗಳ ನೆರವಿನಿಂದ ಆಹಾರ ಸಾಮಾಗ್ರಿಗಳನ್ನು ವಿತರಿಸುವ ಯೋಜನೆ ಹಾಕಿಗೊಳ್ಳಲಾಗುವುದು ಎಂದರು. ಹೊಸಂಗಡಿ ಗ್ರಾಮ ಪಂಚಾಯತ್ ಅದ್ಯಕ್ಷೆ ಹೇಮಾವಸಂತ್ ಗ್ರಾಮಸ್ಥರಿಗೆ ಜಾಗೃತಿ ಮೂಡಿಸುವ ಕರಪತ್ರವನ್ನು ಬಿಡುಗಡೆ ಮಾಡಿದರು.

ವೇಣೂರು ಆರಕ್ಷಕ ಠಾಣೆ ಕಾನ್ಸ್ಟೇಬಲ್ ವಿಜಯ ಕೊರೊನ ವೈರಸ್ ಬಗೆ ಮಾಹಿತಿ ನೀಡಿ, ವೈರಸ್‌ಗೆ ಸಂಬಂಧಿಸಿದಂತೆ ಯಾವುದು ಸರಿ- ತಪ್ಪು ಬಗ್ಗೆ ಮಾಹಿತಿ ನೀಡಿದರಲ್ಲದೆ ದ.ಕ ಪೊಲೀಸ್ ಇಲಾಖೆಯಿಂದ ಅಡ್ವೈಸರಿಯನ್ನು ವಿವರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮನಸೊಇಚ್ಚೆ ಸಮುದಾಯಗಳನ್ನು ಗುರಿ ಮಾಡಿ ಬರೆದರೆ , ಹಂಚಿದರೆ ಹಾಗು ಈ ಬಗ್ಗೆ ಮಾತಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕ್ಲಬ್ಬಿನ ಅದ್ಯಕ್ಷ ಹಾಗು ಗ್ರಾ.ಪಂ ಸದಸ್ಯ ಹರಿಪ್ರಸಾದ್ ಪ್ರಾಸ್ತಾವಿಕ ಮಾತಾಡಿದರು. ಸುಮಾರು ೧೫೦ ಕುಟುಂಬಗಳಿಗೆ ಅವರ ಮನೆಗೆ ಹೋಗಿ ಮಾಸ್ಕ್ ಮತ್ತು ಕೊರೊನ ಜಾಗೃತಿ ಬಿತ್ತಿ ಪತ್ರದೊಂದಿಗೆ ೧೦ ಕೆ.ಜಿ ಅಕ್ಕಿ, ಸಕ್ಕರೆ, ಚಾಹುಡಿ, ಮೆಣಸು, ಉಪ್ಪು, ತರಕಾರಿಗಳು ಸೇರಿದಂತೆ ಹಲವು ದಿನಸಿಗಳ ಕಿಟ್‌ನ್ನು ವಿತರಿಸಲಾಗುವುದೆಂದು ಎಂದರು. ಪಂಚಾಯತ್ ಸದಸ್ಯರುಗಳಾದ ಅಕ್ಬರಾಲಿ, ರುಕ್ಮಯ್ಯ, ಸುಮತಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಹರಿ ಹೆಗ್ಡೆ ಕೊಡಮನಿ, ಸುಶಾಂತ್ ಕರ್ಕೇರ, ಅಲ್ಲಿಯಬ್ಬ, ಸುಜಿತ್, ಸೂರಪ್ಪ ಕೊಡಂಗೇರಿ, ಆನಂದ ಕೊಡ್ಂಗೇರಿ, ಇಸ್ಮಾಯಿಲ್ ಕೆ ಪೆರಿಂಜೆ, ಹಮೀದ್ ಬಲ್ಲಂಗೇರಿ, ಅಜಯ್ ಸತೀಶ್ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಕ್ಲಬ್ ಕಾರ್ಯದರ್ಶಿ ಹಾಗು ಪಂಚಾಯತ್ ಸದಸ್ಯ ಶ್ರಿಪತಿ ಭಟ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.