ಪುಂಜಾಲಕಟ್ಟೆ-ಮಡಂತ್ಯಾರು ಪೇಟೆಯಲ್ಲಿ ಸ್ವಚ್ಛತಾ ಕಾರ್ಯ

ಮಡಂತ್ಯಾರು: ಮಡಂತ್ಯಾರು ಗ್ರಾ.ಪಂ ಮತ್ತು ಮಡಂತ್ಯಾರು ಸೇಕ್ರೆಡ್ ಹಾರ್ಟ್ ಚರ್ಚ್‍ನ ಧರ್ಮಗುರುಗಳ ನೇತೃತ್ವದ ಐಸಿವೈಎಂ ಮಡಂತ್ಯಾರು ಶಾಡ್ವೋ ರೈಡರ್ಸ್ ಮಡಂತ್ಯಾರು, ಕುಕ್ಕಳ ಗ್ರಾಮದ ಬೆರ್ಕಳ ಯುವ ಸಮುದಾಯದ ಸಹಕಾರದಿಂದ ಮಡಂತ್ಯಾರು ಮತ್ತು ಪುಂಜಾಲಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೋಪಾಲಕೃಷ್ಣ ಕೆ, ಧರ್ಮಗುರುಗಳಾದ ರೆ| ಫಾ| ಬೇಸಿಲ್ ವಾಸ್, ಕ್ಯಾಥೊಲಿಕ್ ಸಭಾದ ಸದಸ್ಯರು, ಗ್ರಾ.ಪಂ. ಸದಸ್ಯರಾದ ಕಿಶೋರ್ ಶೆಟ್ಟಿ, ವರ್ತಕರ ಸಂಘದ ಅಧ್ಯಕ್ಷ ಜಯಂತ ಶೆಟ್ಟಿ, ರಮೇಶ್ ಮೂಲ್ಯ. ರೋಟರಿ ಕ್ಲಬ್ ಸದಸ್ಯರು, ಮಹಿಷಮರ್ದಿನಿ ಯಕ್ಷಗಾನ ಸಂಘದ ಸದಸ್ಯರು ಉಪಸ್ಥಿತರಿದ್ದರು. ಪಿಡಿಒ ನಾಗೇಶ್ ಎಂ. ಜನಜಾಗೃತಿ ಸಂದೇಶವನ್ನು ನೀಡಿದರು. ಗ್ರಾ. ಪಂ. ಸಿಬ್ಬಂದಿ ಉಮೇಶ್, ಕಾರ್ತಿಕ್ ಸಹಕರಿಸಿದರು.


ಕೊಲ್ಪೆದಬೈಲು ಸ್ವಚ್ಛತೆ:
ಮಡಂತ್ಯಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಎ.4ರಂದು ಸ್ವಯಂ ಸೇವಕರ ನೇಮಕಾತಿ ರದ್ದು ಆದರೂ ತಹಶೀಲ್ದಾರರ ವಿಶೇಷ ಮೌಖಿಕ ಅನುಮತಿ ಪಡೆದು ಮಾ.5ರಂದು ಭಾನುವಾರ ಮಡಂತ್ಯಾರು, ಪುಂಜಾಲಕಟ್ಟೆ, ಕೊಲ್ಪೆದಬೈಲು ಪೇಟೆಯಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಯಿತು. ಈ ಕಾರ್ಯಕ್ರಮಕ್ಕೆ ಉತ್ಸಾಹಿ ಯುವಕರನ್ನು ಬಳಸಿ ಸಂಪೂರ್ಣ ಸ್ವಚ್ಛತಾ ಕಾರ್ಯ ನಡೆಸಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.