HomePage_Banner_
HomePage_Banner_

ತಾಲೂಕಿನಲ್ಲಿ ಸುರಿದ ಮಳೆಗೆ ಇಳೆಯ ತಾಪ ಹೆಚ್ಚಿತು!

ಬೆಳ್ತಂಗಡಿ: ತಾಲೂಕಿನಲ್ಲಿ ಹೆಚ್ಚಾಗಿದ್ದ ಬಿಸಿಲಿನ ತಾಪಕ್ಕೆ ಅಲ್ಪ ಸಮಯ ಮಳೆ ಬಂದು ಭೂಮಿಯ ಶಾಖ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.


ತಾಲೂಕಿನ ಕೆಲವು ಪ್ರದೇಶಗಳಲ್ಲಿ ಎ.7ರ ಮಧ್ಯಾಹ್ನ 3 ರ ಬಳಿಕ ಮೋಡ ಕವಿದ ವಾತಾವರಣ ಕಂಡು ಬಂದಿತು. ಆ ನಂತರ ಸುರಿದ ಮಳೆಯಿಂದ ಬಿಸಿಲಿನ ತಾಪದಿಂದ ಕೊಂಚ ಹೊತ್ತು ನಿರಾಳತೆ ಕಂಡು ಬಂದರೂ. ಮಳೆ ನಿಂತ ಬಳಿಕ ಜನರಿಗೆ ಬಿಸಿಯ ತಾಪ ಮತ್ತಷ್ಟು ಹೆಚ್ಚುವಂತೆ ಮಾಡಿದೆ ಈ ಅಲ್ಪಕಾಲದ ಮಳೆ.
ಬೆಳ್ತಂಗಡಿ, ಉಜಿರೆ, ನಾರಾವಿ, ಅಳದಂಗಡಿ, ಪೆರೋಡಿತ್ತಾಯ ಕಟ್ಟೆ , ಗುರುವಾಯನಕೆರೆ, ವೇಣೂರು ಸೇರಿದಂತೆ ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ಅಲ್ಪಕಾಲ ಮಳೆ ಸುರಿದು ವಾತಾವರಣದ ತಾಪಮಾನವನ್ನು ತಗ್ಗಿಸಿತು. ಈ ಎಲ್ಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದ್ದು ಕಂಡು ಬಂತು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.