ರಾಜಕೇಸರಿ ಕುತ್ಲೂರು ತಂಡದಿಂದ ಅಗತ್ಯ ಸಾಮಾಗ್ರಿ ವಿತರಣೆ

ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಬಡವರಿಗೆ ಅಗತ್ಯ ಸಾಮಾಗ್ರಿಗಳ ಖರೀದಿಸಲು ಸಂಕಷ್ಟವಾಗಿದೆ. ಅದಕ್ಕಾಗಿ ರಾಜಕೇಸರಿಯ ಸಹ ಸಂಸ್ಥೆಯಾದ ರಾಜಕೇಸರಿ ಕುತ್ಲೂರು ಅವರ ವತಿಯಿಂದ ಸುಶೀಲಾ ದೇವಾಡಿಗ ಮತ್ತು ಸಿದ್ದಮ್ಮ ದೇವಾಡಿಗ ಅವರಿಗೆ 10 ಕೆ.ಜಿ ಅಕ್ಕಿ ಮತ್ತು ಅಗತ್ಯ ಸಾಮಾಗ್ರಿಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ರಾಜಕೇಸರಿ ಸಂಸ್ಥಾಪಕರಾದ ದೀಪಕ್.ಜಿ ಬೆಳ್ತಂಗಡಿ, ವೇಣೂರು ಠಾಣಾ ಉಪನಿರೀಕ್ಷಕರಾದ ಲೋಲಾಕ್ಷ.ಕೆ, ಪೊಲೀಸ್ ಕಾನ್ಸ್ಟೆಬಲ್ ಕೃಷ್ಣ ನಾಯ್ಕ್ , ಪಿ.ಎಸ್.ಐ. ಸಂದೀಪ್ ಕುಮಾರ್ ಶೆಟ್ಟಿ, ಹನುಮಂತಪ್ಪ, ರಾಜಕೇಸರಿ ತಾಲೂಕು ಅಧ್ಯಕ್ಷ ಲೋಕೇಶ್ ಕುತ್ಲೂರು, ರಾಜಕೇಸರಿ ಕುತ್ಲೂರಿನ ಸಂಚಾಲಕ ಸಂಪತ್ ಜೈನ್, ಶಶಿಧರ್ ಕುಲಾಲ್ ಪ್ರಶಾಂತ್ ಪೂಜಾರಿ ಪಿಲ್ಯ, ಸುಮಂತ್ ಕುತ್ಲೂರು, ಚಂದ್ರಶೇಖರ್ ಕುತ್ಲೂರು, ದೀಪಕ್ ಶೆಟ್ಟಿ, ಸಂಪತ್ ಕುಮಾರ್, ನಿತಿನ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.