HomePage_Banner_
HomePage_Banner_
HomePage_Banner_

ಅನಗತ್ಯ ಸಂಚರಿಸುವ ವಾಹನಗಳು ಪೊಲೀಸ್ ವಶಕ್ಕೆ ಬೆಳ್ತಂಗಡಿ ಪೊಲೀಸರಿಂದ ಕಾರ್ಯಾಚರಣೆ

Advt_NewsUnder_1

ಬೆಳ್ತಂಗಡಿ: ಕೊರೊನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್, ನಿಷೇಧಾಜ್ಞೆ ಆದೇಶ ಮಾತ್ರವಲ್ಲದೇ ಮಧ್ಯಾಹ್ನ ನಂತರ ಸಂಪೂರ್ಣ ಬಂದ್‍ಗೆ ಜಿಲ್ಲಾಡಳಿತ ಸೂಚಿಸಿದ್ದರೂ ಕೆಲವರು ಅನಗತ್ಯವಾಗಿ ಸಂಚರಿಸುವ ವಾಹನ ಸವಾರರಿಗೆ ಪೊೊಲೀಸರು ಬಿಸಿ ಮುಟ್ಟಿಸಿದ್ದಾರೆ.

ಬೆಳ್ತಂಗಡಿ ಮುಖ್ಯರಸ್ತೆಯಲ್ಲಿ ಎ.7ರಂದು ಅನಗತ್ಯವಾಗಿ ಸಂಚರಿಸಿ ನಿಷೇಧಾಜ್ಞೆ ಉಲ್ಲಂಘಿಸುವ ವಾಹನ ಸವಾರರನ್ನು ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್‍ಐ ನಂದಕುಮಾರ್ ಎಂ.ಎಂ ಹಾಗೂ ಸಿಬ್ಬಂದಿಗಳು ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಆದೇಶಿಸಿರುವಂತೆ ದಿನನಿತ್ಯ ಬೆಳಗ್ಗೆ 7ರಿಂದ ಮಧ್ಯಾಹ್ನ 12ಗಂಟೆಯವರೆಗೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವಿದೆ. ಮಧ್ಯಾಹ್ನ ನಂತರ ತುರ್ತು ಅವಶ್ಯಕತೆ ಹಾಗೂ ಪಾಸ್ ಹೊಂದಿರುವವರ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅವಕಾಶವಿದೆ.

ಅನಗತ್ಯವಾಗಿ ತಿರುಗಾಡಿ ನಿಷೇಧಾಜ್ಞೆ ಉಲ್ಲಂಘಿಸಿ ಕೊರೋನ ಸಾಂಕ್ರಾಮಿಕ ರೋಗ ತಡೆಗಟ್ಟಲು ಅಡ್ಡಿಪಡಿಸುವಂತೆ ವಾಹನಗಳಲ್ಲಿ ಓಡಾಡುವ ವಾಹನ ಸವಾರರನ್ನು ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್ಐ ನಂದಕುಮಾರ್ ಎಂಎಂ ಮತ್ತು ಸಿಬ್ಬಂದಿಯ ವರು ಪರಿಶೀಲಿಸಿ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದರು…..

ಸಾರ್ವಜನಿಕರ ಅನಾವಶ್ಯಕ ಓಡಾಟವನ್ನು ತಡೆಗಟ್ಟಿ ಕೋವಿಡ್ 19 ತಡೆಗಟ್ಟಲು ಈ ಕ್ರಮ ಅನಿವಾರ್ಯವಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.