ರೋಟರಿ ಕ್ಲಬ್‍ನಿಂದ ಬೆಳ್ತಂಗಡಿ ನ.ಪಂ., ಉಜಿರೆ ಗ್ರಾ.ಪಂ. ಕಾರ್ಮಿಕರಿಗೆ ಸ್ವಚ್ಛತಾ ಪರಿಕರಗಳ ವಿತರಣೆ

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ನಗರ ಪಂಚಾಯತ್ ಕಾರ್ಮಿಕರಿಗೆ ವ್ಯಕ್ತಿಗತ ಸ್ವಚ್ಛತೆ ಕಾಪಾಡಿಕೊಳ್ಳಲು ಬೇಕಾದ ಕೆಲವು ಅಗತ್ಯ ಪರಿಕರಗಳನ್ನು ವಿತರಿಸಲಾಯಿತು.

ವಿಶ್ವ ಆರೋಗ್ಯ ದಿನದ ಅಂಗವಾಗಿ ನಗರ ಪಂಚಾಯತ್ ಕಾರ್ಯಾಲಯ ಆವರಣದಲ್ಲಿ ಎ.7ರಂದು ನ.ಪಂ. ಕಾರ್ಮಿಕರಿಗೆ ಹ್ಯಾಂಡ್‍ವಾಶ್ (5ಲೀ.), 30 ಮಾಸ್ಕ್, ಪ್ರಥಮ ಚಿಕಿತ್ಸೆ ಕಿಟ್, ಗ್ಲೌಸ್‍ಗಳನ್ನು ರೋಟರಿ ಕ್ಲಬ್ ಅಧ್ಯಕ್ಷ ರೋ.ಜಯರಾಮ್ ಅವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನ.ಪಂ.ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ನ.ಪಂ.ಮುಖ್ಯ ಇಂಜಿನಿಯರ್ ಮಹಾವೀರ್, ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ರೋ.ಧನಂಜಯ ರಾವ್, ಯಶವಂತ್ ಪಟವರ್ಧನ್, ಪ್ರಕಾಶ್ ತುಳಪುಳೆ, ಶಶಿಕಾಂತ್ ಡೋಂಗ್ರೆ ಮುಂತಾದವರು ಉಪಸ್ಥಿತರಿದ್ದರು.

ಉಜಿರೆ ಗ್ರಾ.ಪಂ.ನ ಕಾರ್ಮಿಕರಿಗೆ ವಿತರಣೆ:

ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಎ.7ರಂದು ರೋಟರಿ ಕ್ಲಬ್ ವತಿಯಿಂದ ಉಜಿರೆ ಗ್ರಾಮ ಪಂಚಾಯತ್‍ನ ಕಾರ್ಮಿಕರಿಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್, ಹ್ಯಾಂಡ್‍ವಾಶ್ ಅಗತ್ಯ ಪರಿಕರಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ಸೇನಾನಿ ರಾಮಚಂದ್ರ ಶೆಟ್ಟಿ, ರೊ.ಶ್ರೀಧರ ರಾವ್, ನಿಯೋಜಿತ ಅಧ್ಯಕ್ಷ ಧನಂಜಯ ರಾವ್, ಮಾಜಿ ಅಧ್ಯಕ್ಷ ರೊ.ಡಿ.ಎಂ.ಗೌಡ, ಅರುಣ್ ಕುಮಾರ್, ರೊ.ಶಶಿಕಾಂತ ಡೋಂಗ್ರೆ, ರೊ. ಪೂರಣ್ ವರ್ಮ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.