HomePage_Banner_
HomePage_Banner_
HomePage_Banner_

ರೆಜಿನಾ ನರ್ಸರಿಯ ವಿ.ಟಿ.ಮಾರ್ಕೋಸ್ ನಿಧನ

ಬೆಳ್ತಂಗಡಿ: ತೋಟತ್ತಾಡಿ ಗ್ರಾಮದ ರೆಜಿನಾ ನರ್ಸರಿಯ ವಿ.ಟಿ.ಮಾರ್ಕೋಸ್(76) ಒಂದು ವಾರದ ಅನಾರೋಗ್ಯದಿಂದ ಎ.5ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ತೋಟತ್ತಾಡಿ ಗ್ರಾಮದಲ್ಲಿ 1985ರಲ್ಲಿ ಆರಂಭಿಸಿದ ರೆಜಿನಾ ರಬ್ಬರ್ ನರ್ಸರಿಯಲ್ಲಿ 40 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇಲ್ಲಿ ವಿವಿಧ ತಳಿಯ ಹಣ್ಣಿನ ಗಿಡಗಳು, ತೆಂಗು, ಅಡಿಕೆ, ರಬ್ಬರ್, ಗೇರು ವಿವಿಧ ನರ್ಸರಿ ತಳಿಗಳು ಹಾಗೂ ಸಾಕು ಮೀನುಗಳು, ಹೈನೋದ್ಯಮವನ್ನು ಕುಟುಂಬ ಸದಸ್ಯರೊಂದಿಗೆ ಉದ್ಯಮ ಬೆಳೆಸಿದ್ದಾರೆ. ಮೃತರು ಪತ್ನಿ ತ್ರೇಸಿಯಾ ಕೆ.ಪಿ, ಪುತ್ರ ಥೋಮಸ್, ಪುತ್ರಿಯರಾದ ರೆಜಿನಾ, ಬಿಂದು, ಸಿಂಧೂ ಮತ್ತು ಮೊಮ್ಮಕ್ಕಳು, ಕುಟುಂಬಸ್ಥರು, ಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.