ಶಬೇ ಬರಾಅತ್ ಆಚರಣೆ ಮಸ್ಜಿದ್, ಕಬರ್ ಸ್ಥಾನಗಳಲ್ಲಿ ಸಾಮೂಹಿಕವಾಗಿ ಸೇರದಂತೆ ವಕ್ಫ್ ಬೋರ್ಡ್ ಸೂಚನೆ; ಇಸ್ಲಾಮಿಕ್ ಮಾಸ ಅರೆಬಿಕ್

ಇಸ್ಲಾಮಿಕ್ ಮಾಸ ಅರೆಬಿಕ್ ತಿಂಗಳ ಶಹಬಾನ್ ಹದಿನೈದರ ರಾತ್ರಿ ಆಚರಿಸಲ್ಪಡುತ್ತಿರುವ ಶಬೇ ಇ ಬರಾಅತ್ ಕಾರ್ಯಕ್ರಮ ಗಳನ್ನು ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾರೂ ಕೂಡ ಮಸ್ಜಿದ್ ಮತ್ತು ಕಬರ್ ಸ್ಥಾನಗಳಲ್ಲಿ ‌ಸಾಮೂಹಿಕವಾಗಿ ನಡೆಸದಂತೆ ಕರ್ನಾಟಕ ಸರಕಾರ ವಕ್ಫ್ ಬೋರ್ಡ್ ಮೂಲಕ ಎಲ್ಲಾ ಮಸ್ಜಿದ್ ಆಡಳಿತ ಮಂಡಳಿಗಳಿಗೆ ಆದೇಶ ಬಿಡುಗಡೆಗೊಳಿಸಿದೆ.

ಈಗಾಗಲೇ ಕೊರೊನಾ ಹರಡುವ ಮುಂಜಾಗ್ರತಾ ಕ್ರಮವಾಗಿ ಮಸ್ಜಿದ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಶುಕ್ರವಾರದ ಸಾಮೂಹಿಕ ನಮಾಝ್ ನಡೆಸದಂತೆ ನಿರ್ದೇಶನ ನೀಡಲಾಗಿದೆ.

ಅದರ‌ ಮುಂದುವರಿದ ಭಾಗವೆಂಬಂತೆ ಶಬೇ ಇ ಬರಾಅತ್ ಧಾರ್ಮಿಕ ಆಚರಣೆಗಳನ್ನು ಅವರವರ ಮನೆಯಲ್ಲೇ ಆಚರಿಸಬಹುದಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳು ವ ಉದ್ಧೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.