HomePage_Banner_
HomePage_Banner_
HomePage_Banner_

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶುದ್ಧಗಂಗಾ ಘಟಕದಿಂದ ಕುಡಿಯುವ ನೀರು ಸರಬರಾಜು ರಾಜ್ಯದ 71,000 ಕುಟುಂಬಗಳಿಂದ ನೀರಿನ ಬಳಕೆ

ಬೆಳ್ತಂಗಡಿ: ಕೊರೊನಾ ವೈರಸ್‍ನಿಂದಾಗಿ ರಾಜ್ಯದೆಲ್ಲೆಡೆ ಲಾಕ್‍ಡೌನ್ ಘೋಷಿಸಿದ್ದರೂ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ 18 ಜಿಲ್ಲೆಗಳಿಗೆ ಶುದ್ಧಗಂಗಾ ಘಟಕಗಳಿಂದ ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್ ತಿಳಿಸಿದ್ದಾರೆ.

ಕುಡಿಯುವ ನೀರಿನ ಸರಬರಾಜಿಗಾಗಿ 275 ಶುದ್ಧಗಂಗಾ ಘಟಕಗಳು, ಪ್ರತಿನಿತ್ಯ 71,000 ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಪ್ರತಿನಿತ್ಯ ಕುಟುಂಬವೊಂದಕ್ಕೆ ಪರಿಷ್ಕರಿಸಿದ 20 ಲೀಟರ್ ನೀರು ಒದಗಿಸಲಾಗುತ್ತಿದೆ. ಇದಕ್ಕಾಗಿ ಹೆಚ್ಚಿನ ಘಟಕಗಳನ್ನು ಯಾಂತ್ರೀಕೃತಗೊಳಿಸಿ, ಮಾನವ ನಿರ್ವಹಣಾ ರಹಿತ ಘಟಕಗಳಾಗಿ ಮಾಡಲಾಗಿದೆ. ದಿನಕ್ಕೆ ಸುಮಾರು 14 ಲಕ್ಷ ಲೀಟರ್ ಶುದ್ಧೀಕರಿಸಿದ ನೀರನ್ನು ಜನರು ಬಳಸುತ್ತಿದ್ದಾರೆ. ಇದಕ್ಕಾಗಿ 325 ಮಂದಿ ಕಾರ್ಯಕರ್ತರು ಕೆಲಸ ನಿರ್ವಹಿಸುತ್ತಿದ್ದು ಅದಕ್ಕಾಗಿ ಪಂಚಾಯತ್‍ಗಳಿಂದ ಕೆಲಸ ನಿರ್ವಹಣೆಯ ಅನುಮತಿ ಪಡೆಯಲಾಗಿದೆ ಎಂದರು.


ಪ್ರತಿಯೊಬ್ಬರು ನೀರು ಪಡೆಯುವಾಗ ಗ್ರಾಹಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿಲ್ಲಲು ಮಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರ ಮಾರ್ಗದರ್ಶನದಲ್ಲಿ ಎಲ್ಲ ಘಟಕಗಳು ಸುಸ್ಥಿರವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಮಾಡಿದ್ದು, ಬಳಕೆದಾರರಿಗೆ ತೊಂದರೆಯಾಗದಂತೆ, ಘಟಕಗಳನ್ನು ನಿರ್ವಹಿಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.