HomePage_Banner_
HomePage_Banner_
HomePage_Banner_

ಕೊಯ್ಯೂರು:ಬಡ ಕುಟುಂಬಗಳಿಗೆ ಅಕ್ಕಿ ಮತ್ತು ಅಗತ್ಯ ಸಾಮಾಗ್ರಿಗಳ ವಿತರಣೆ

Advt_NewsUnder_1

ಕೊಯ್ಯೂರು ಸ್ನೇಹಿತರ ಬಳಗದಿಂದ ಎ.5 ರಂದು ಬಡ ಕುಟುಂಬಗಳ ಮನೆಗೆ ಅಕ್ಕಿ ಮತ್ತು ಅಗತ್ಯ ಸಾಮಾಗ್ರಿಗಳ ವಿತರಣೆ ಸಾಂಕೇತಿಕವಾಗಿ ದೇಂತ್ಯಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಬಳಿ ನಡೆಯಿತು.

ಕೊಯ್ಯೂರು ಗ್ರಾಮದ ಕೆಲವೊಂದು ಭಾಗದಲ್ಲಿ ಆರ್ಥಿಕವಾಗಿ ಸಂಕಷ್ಟದ ಸ್ಥಿತಿಯಲ್ಲಿರುವ ಬಡ ಕುಟುಂಬಗಳಿಗೆ ಅಕ್ಕಿ ಮತ್ತು ಅಗತ್ಯ ಪದಾರ್ಥಗಳ ದಿನಸಿ ವಸ್ತುಗಳ 22 ಕಿಟ್ಟ್ ಗಳನ್ನು ಪ್ರತಿ ಮನೆ-ಮನೆಗಳಿಗೆ ತೆರಳಿ ವಿತರಣೆ ಮಾಡಿದರು.ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಶುಚಿತ್ವದ ಬಗ್ಗೆ ಪ್ರತಿ ಮನೆಯಲ್ಲಿ ಜನರಿಗೆ ಮಾಹಿತಿಯನ್ನು ಹಾಗೂ ಮುನ್ನೆಚ್ಚರಿಕೆ ವಹಿಸುವ ಕ್ರಮಗಳನ್ನು ತಿಳಿಸಿದರು.

ಗ್ರಾಮದ ಎಲ್ಲಾ ಸಮುದಾಯದ ಬಡ ಕುಟುಂಬಗಳನ್ನು ಅಯ್ಕೆ ಮಾಡುವ ಮೂಲಕ ಸಮಾಜ ಮುಖಿ ಕಾರ್ಯದಲ್ಲಿ ತೊಡಗಿರುವ ಸ್ನೇಹಿತರ ಬಳಗದ ಸದಸ್ಯರನ್ನು ಗ್ರಾಮಸ್ಥರು ಕೊಂಡಾಡಿದ್ದಾರೆ.ಸ್ನೇಹಿತರ ಬಳಗದ ಸದಸ್ಯರು ಮುಖಕ್ಕೆ ಮಾಸ್ಕ್ , ಕೈ ಕವಚ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಎಲ್ಲಾರಿಗೂ ಮಾದರಿಯಾಗಿದ್ದರು.

ಈ ಸಂದರ್ಭದಲ್ಲಿ ಪಶು ವೈದ್ಯ ಅಧಿಕಾರಿ ಡಾ.ಕಾರ್ತೀಕ್‌ ಪಾಂಬೇಲು,ಬೆಳ್ತಂಗಡಿ ಶಿಕ್ಷಣ ಇಲಾಖೆ ಪ್ರಥಮ ದರ್ಜೆ ಸಹಾಯಕ ಅದರ್ಶ್ ಪಾಂಬೇಲು,ಬುಳ್ಳೇರಿ ಮೋಗ್ರು ಪ್ರೌಢಶಾಲಾ ಶಿಕ್ಷಕ ಧನಂಜಯ ಪಾಂಬೇಲು,ಪಾಣೆಮಂಗಳೂರು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಪ್ರೇಮಚಂದ್ರ ಪಾಂಬೇಲು,ಬೆಂಗಳೂರು ಇಂಡೊ ಮಿಮ್ ಕಂಪನಿ ಚಂದ್ರ ಶೇಖರ ಪಾಂಬೇಲು,ಪ್ರಗತಿ ಪರ ಕೃಷಿಕ ಕೇಶವ ಕೊಂಗುಜೆ ,ಸುಜಿತ್ ಯು.ಉಗ್ರೋಡಿ, ಬೆಳ್ತಂಗಡಿ ಮೆಸ್ಕಾಂ ಲೈನ್ ಮನ್ ಕಕ್ಕಿಂಜೆ ವಲಯ ವಸಂತ ಕಳೆಂಜಾರು, ಉಜಿರೆ ಹೆಲ್ತ್‌ಕೇರ್ ಸೆಂಟರ್ ಮೋಹನ್ ಕೆ.ಎಸ್.ಕೊರ್ಯಾರು,ಮಂಗಳೂರು ಮೆಡಿಕಲ್ ಪ್ರತಿನಿಧಿ ಚಂದ್ರ ಶೇಖರ್ ಕೊರ್ಯಾರು,ಜನಾರ್ದನ ಉಮಿಯ, ಸಂತೋಷ ಕೊರ್ಯಾರು, ಯತೀಶ್ ಭಂಡಾರಿಕೋಡಿ,ರೋಹಿತಾಕ್ಷ ಉಮಿಯ, ರೋಶನ್ ನಾಣಿಲ್ದ ಪಲ್ಕೆ ,ಅನಂದ ಕೊರ್ಯಾರು,ಜಿಲ್ಲಾ ಮಳೆ ಮಾಪನ ನಿರ್ವಾಹಕ ಜಯಾನಂದ ನಿರಾರಿ ನಾರ್ಯ ಉಪಸ್ಥಿತರಿದ್ದು ಸಹಕರಿಸಿದರು.ಪ್ರಗತಿಪರ ಕೃಷಿಕ ಲೋಕೇಶ್ ಪಾಂಬೇಲು ಮತ್ತು ಬೊಮ್ಮಣ್ಣ ಕೊರ್ಯಾರು ನೇತೃತ್ವ ವಹಿಸಿದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.