ಸಂಘ ಸಂಸ್ಥೆಗಳು ಕಿಟ್ಟ್ ನೀಡುವಾಗ, ಸ್ಥಳೀಯವಾಗಿ ಸಮಸ್ಯೆಯಾಗದಂತೆ ನೋಡಿಕೊಳ್ಳಿ: ಕೋಟ

ಬೆಳ್ತಂಗಡಿಯಲ್ಲಿ ಅಧಿಕಾರಿಗಳ ಜೊತೆ ಪ್ರಗತಿಪರಿಶೀಲನಾ ಸಭೆ

ಬೆಳ್ತಂಗಡಿ; ಕೊರೊನಾ ನಿಯಂತ್ರಣ ಮತ್ತು ಜಾಗೃತಿಯ ಬಗ್ಗೆ ದ.ಕ ಜಿಲ್ಲೆಯಲ್ಲಿ, ವೈದ್ಯರುಗಳು, ಸಂಬಂಧಪಟ್ಟ ಸಿಬ್ಬಂದಿಗಳು, ಅಧಿಕಾರಿಗಳು, ಜನಪ್ರತಿನಿಧಿಗಳು ಸಮನ್ವಯತೆಯಿಂದ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಧನಾತ್ಮಕ ವಾತಾವರಣ ನೆಲೆಸಿದೆ.

ಈ ಎಲ್ಲ ಬೆಳವಣಿಗೆಗಳಿಂದ ಜಿಲ್ಲೆಯಲ್ಲಿ ಮೊದಲ ಕೊರೊನಾ ವೈರಸ್ ಕಂಡುಬಂದಿದ್ದ ಭಟ್ಕಳ ಮೂಲದ ವ್ಯಕ್ತಿ ಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ಎಲ್ಲದರ ನಡುವೆ ಜನತೆಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲಾಗುತ್ತಿದೆ.

ಜನತೆಗೆ, ವಲಸೆ ಕಾರ್ಮಿಕರಿಗೆ,ಅನಾಥರಿಗೆ, ಸಮಸ್ಯೆಯಿಂದ ಇರುವವರಿಗೆ ಸರಕಾರದ ವತಿಯಿಂದಲೇ ಮುಜರಾಯಿ ದೇವಸ್ಥಾನ ಇತ್ಯಾಧಿಗಳ ಕಡೆಯಿಂದ ವ್ಯವಸ್ಥೆ ಒದಗಿಸಿಕೊಂಡಲಾಗುತ್ತಿದೆ. ಈ ಮಧ್ಯೆ ಕೆಲವು ಸಂಘ ಸಂಸ್ಥೆಗಳು ಆಹಾರ ಸಾಮಾಗ್ರಿಗಳ ಕಿಟ್ಟ್‌ಗಳನ್ನು ಕೊಡಲು ಮುಂದೆ ಬರುತ್ತಿದ್ದು ಅಂತವರು ಯಾವುದೇ ಅನುಮತಿ ಪಡೆಯಬೇಕಾಗಿಲ್ಲ.

ಆದರೆ ಆದಷ್ಟು ತಾಲೂಕು ಆಡಳಿತ, ಜಿಲ್ಲಾಡಳಿತದ ಮೂಲಕವೇ ವಿತರಣೆಗೆ ಕ್ರಮ ಕೈಗೊಂಡರೆ ಉತ್ತಮವಿತ್ತು. ಆದಾಗ್ಯೂ ಸಂಘ ಸಂಸ್ಥೆಯವರು ಕೊಟ್ಟರೆ ಆಕ್ಷೇಪಗಳಿಲ್ಲ, ಆದರೆ ಅಲ್ಲಿ ಸ್ಪರ್ಧಾತ್ಮಕವಾದ ವಾತಾವರಣ, ಸಂಘರ್ಷಕ್ಕೆ ಕಾರಣ ಆಗಬಾರದು ಎಂಬ ಕಾರಣಕ್ಕೆ ಅನುಮತಿ ತೆಗೊಳ್ಳಿ ಎಂಬ ಮಾತನ್ನು ಹೇಳಲಾಗಿದೆ. ಎಲ್ಲಿ ಅನುಮತಿಯ ಅಗತ್ಯ ಇದೆಯೇ ಅದನ್ನು ಪರಿಶೀಲಿಸಿ ಅಗತ್ಯಬಿದ್ದಲ್ಲಿ ನೀಡುತ್ತಾರೆ. ಸ್ಥಳೀಯವಾಗಿ ಸಮಸ್ಯೆಗಳು ಆಗದಂತೆ ಮತ್ತು ನಿಯಮ ಮೀರದಂತೆ ಕೆಲಸ ನಿರ್ವಹಿಸಿದರೆ ಉತ್ತಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೆಳ್ತಂಗಡಿ ತಾ.ಪಂ ಸಭಾಂಗಣದಲ್ಲಿ ಏ. 6 ರಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಶಾಸಕ ಹರೀಶ್ ಪೂಂಜ, ಸಂಸದ ನಳಿನ್ ಕುಮಾರ್ ಕಟೀಲು ಅವರು ಉಪಸ್ಥಿತರಿದ್ದರು.

ಇದೇ ವೇಳೆ ಸಚಿವರು ಇಲಾಖಾವಾರು ಕೊರೊನಾ ನಿಯಂತ್ರಣ ಅನುಷ್ಠಾನಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.