8714 ಕಡು ಬಡವರಿಗೆ 68.1 ಲಕ್ಷ ರೂ. ಮಾಸಾಶನ ವಿತರಿಸಿದ ಗ್ರಾ. ಯೋಜನೆಯ ಕಾರ್ಯಕರ್ತರು

ಸಂಘಗಳ ಸಾಲ ಮರುಪಾವತಿಗೆ ಜೂ. 30 ರ ವರೆಗೆ ವಿನಾಯಿತಿ ಘೋಷಣೆ

ಧರ್ಮಸ್ಥಳ: ರಾಜ್ಯಾಧ್ಯಂತ ಬಂದ್ ಇರುವ ಸಂದರ್ಭವೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕರ್ತರು ಏ. 4 ರಂದು ಒಂದೇ ದಿನ ರಾಜ್ಯದ ವಿವಿದೆಡೆಯಲ್ಲಿ 8714 ಕಡು ಬಡವರಿಗೆ 68.1 ಲಕ್ಷ ರೂ. ಮಾಸಾಶನ ವಿತರಿಸಿದ್ದಾರೆ ಎಂದು ಗ್ರಾ.ಯೋ. ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್ ಮಂಜುನಾಥ್ ತಿಳಿಸಿದ್ದಾರೆ.

ಗ್ರಾಮಾಭಿವೃದ್ಧಿ ಯೋಜನೆ ಕಡು ಬಡವರಿಗೆ ಮಾಸಾಶನ ಯೋಜನೆ ಹಮ್ಮಿಕೊಂಡಿದ್ದು ಪ್ರತೀ ತಿಂಗಳು ಈ ಹಣವನ್ನು ಯೋಜನೆಯ ನಗದು ಕೇಂದ್ರಗಳಲ್ಲಿ ವಿತರಿಸಲಾಗುತ್ತಿತ್ತು. ಇದೀಗ ಕೊರೊನಾ ಬಂದ್‌ನಿಂದಾಗಿ ಈ ಹಣವನ್ನು ಯೋಜನೆಯ ಫಲಾನುಭವಿಗಳಿಗೆ ತೊಂದರೆಯಾಗದಂತೆ ಕೇಂದ್ರ ಕಚೇರಿಯಿಂದ ಕಾರ್ಯಕರ್ತರ ಖಾತೆಗೆ ಜಮೆ ಮಾಡಿ ಅದನ್ನು ಆಯಾಯಾ ಎಟಿಎಂ ಗಳಲ್ಲಿ ನಗದು ಮಾಡಿ ಕೇವಲ ಒಂದೇ ದಿನದಲ್ಲಿ ರಾಜ್ಯದ 4315 ಗ್ರಾಮಗಳಲ್ಲಿ 8714 ಫಲಾನುಭವಿಗಳಿಗೆ ಹಂಚಿ ದಾಖಲೆ ಮಾಡಿದೆ.
ಇದರಿಂದ ಯಾವುದೇ ಬ್ಯಾಂಕ್ ಖಾತೆ ಹೊಂದಿರದ, ಆರೋಗ್ಯ ಸಮಸ್ಯೆಗಳುಳ್ಳ, ದುಡಿಯಲು ಅಸಮರ್ಥರಾಗಿರುವ ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದಿದ್ದಾರೆ.

ಯಂತ್ರಧಾರೆ ಕೇಂದ್ರಗಳು ನಿರಂತರ ಕಾರ್ಯಾಚರಣೆ:
ರಾಜ್ಯದ ರೈತರ ಕೃಷಿ ಕೆಲಗಳು ಸಾಂಗವಾಗಿ ನಡೆಸಲು ಅನುಕೂಲವಾಗುವಂತೆ ಧರ್ಮಸ್ಥಳ ಯೋಜನೆಯ ತನ್ನ ಎಲ್ಲಾ ರೈತ ಯಂತ್ರೋಪರಕರಣ ಬಾಡಿಗೆ ಕೇಂದ್ರ “ಯಂತ್ರಧಾರೆ” ಪ್ರತಿದಿನ ವ್ಯವಸ್ಥಿತಿವಾಗಿ ಕಾರ್ಯನಿರ್ವಹಿಸುತ್ತಿದೆ. ಕೊರೊನಾ ಬಂದ್ ಅವಧಿಯಲ್ಲಿ ಸರಕಾರದ ವಿಶೇಷ ಅನುಮತಿ ಪಡೆದು ಯೋಜನೆ ನಡೆಸುತ್ತಿರುವ 154 ಕೇಂದ್ರಗಳ ಪೈಕಿ 150 ಕೇಂದ್ರಗಳು ರೈತರಿಗೆ ಯಂತ್ರಗಳನ್ನು ಪೂರೈಸುತ್ತಿದೆ. ಯೋಜನೆಯ ಕಾರ್ಯಕರ್ತರು ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕಳೆದ 5 ವರ್ಷಗಳಿಂದ ರಾಜ್ಯದ ರೈತರಿಗೆ ಸೇವೆ ನೀಡುತ್ತಿರುವ ಈ ಕೇಂದ್ರಗಳು ಕೊರೊನಾ ಭೀತಿ ಇದ್ದರೂ ಜನಸೇವೆಯಲ್ಲಿ ತೊಡಗಿರುವುದು ರೈತರ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಜೂನ್ 30 ರ ವರೆಗೆ ಸಂಘದ ಸದಸ್ಯರು ಸಾಲದ ಕಂತು ಕಟ್ಟಬೇಕಾಗಿಲ್ಲ:
ಕೊರೊನ ಭೀತಿಯಲ್ಲಿ ವ್ಯವಹಾರಗಳು ಸ್ಥಗಿತಗೊಂಡಿರುವ ಸಮಯದಲ್ಲಿ ಯೋಜನೆಯಿಂದ ಪ್ರಾಯೋಜಿತ ಸ್ವಸಹಾಯ ಸಂಘಗಳ ಸದಸ್ಯರು ಪಡಕೊಂಡಿರುವ ಸಾಲದ ಕಂತುಗಳನ್ನು ಕಟ್ಟದಿದ್ದರೂ ಅದನ್ನು ಕಂತು ಬಾಕಿ ಎಂದು ಪರಿಗಣಿಸಲಾಗುವುದಿಲ್ಲ.
ಲಾಕ್‌ಡೌನ್ ರದ್ದು ಮಾಡುವ ಸರಕಾರದ ನಿರ್ಧಾರದ ಬಳಿಕ ಸಂಘದ ವಾರದ ಸಭೆಗಳನ್ನು ನಡೆಸಲಾಗುವುದು. ಮತ್ತು ಅಗತ್ಯವಿದ್ದವರಿಗೆ ತುರ್ತು ಸಾಲದ ನೆರವನ್ನೂ ಒದಗಿಸಲಾಗುವುದು. ಮರುಪಾವತಿ ಮಾಡುವ ಸಾಮರ್ಥ್ಯ ಇದ್ದವರು ಮರುಪಾವತಿ ಪ್ರಾರಂಭಿಸಬಹುದು. ಇಲ್ಲದಿದ್ದವರಿಗೆ ಜೂ. 30 ರವರೆಗೆ ಮರುಪಾವತಿಗೆ ವಿನಾಯಿತಿ ನೀಡಲಾಗಿದೆ. ಜೊತೆಗೆ ಗ್ರಾ. ಯೋಜನೆಯ ಕಾರ್ಯಕರ್ತರು ಸದ್ಯದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಯಾವುದೇ ಸೇವೆಗೂ ಸಿದ್ದರಾಗಿದ್ದೇವೆ, ಸ್ವ ಸಹಾಯ ಸಂಘದ ಸದಸ್ಯರು ಶಿಸ್ತು ಕಾಪಾಡುತ್ತಿದ್ದಾರೆ.
ಡಾ. ಎಲ್. ಎಚ್ ಮಂಜುನಾಥ್.
ಕಾರ್ಯನಿರ್ವಾಹಕ ನಿರ್ದೇಶಕರು ಗ್ರಾ. ಯೋ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.