ಮದ್ದಡ್ಕ ಹೆಲ್ಪ್ ಲೈನ್ ವಾಟ್ಸ್ ಆ್ಯಪ್ ಗ್ರೂಪಿನಿಂದ ಬಡವರಿಗೆ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ : ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಿಸಿರುವುದರಿಂದ ಕೆಲಸವಿಲ್ಲದೆ ಮನೆಯಲ್ಲಿರುವ ಕೂಲಿ ಕಾರ್ಮಿಕರಿಗೆ, ಬಡವರಿಗೆ ಅಗತ್ಯ ಸಾಮಾಗ್ರಿಗಳ ಕೊಳ್ಳಲು ತೊಂದರೆಯಾದವರಿಗೆ ಮದ್ದಡ್ಕ ಹೆಲ್ಪ್ ಲೈನ್ ವಾಟ್ಸ್ ಆ್ಯಪ್ ಗ್ರೂಪ್ ಆಹಾರ ಸಾಮಾಗ್ರಿಗಳ ವಿಶೇಷ ಕಿಟ್ ವಿತರಿಸಿದೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮದ್ದಡ್ಕದ ಸುತ್ತಮುತ್ತಲಿನ ಹಾಗೂ ವಿದೇಶದಲ್ಲಿ ಉದ್ಯೋಗವಿರುವ ಮುಸ್ಲಿಂ ಯುವಕರು ಮದ್ದಡ್ಕ ಹೆಲ್ಪ್ ಲೈನ್ ಎಂಬ ವಾಟ್ಸ್ ಆ್ಯಪ್ ಗ್ರೂಪ್ ರಚಿಸಿ ಮದ್ದಡ್ಕದ 120 ಬಡ ಕುಟುಂಬಗಳನ್ನು ಗುರುತಿಸಿ ಅವರಿಗೆ ಆಹಾರ ಸಾಮಾಗ್ರಿಗಳ ಕಿಟ್ ಗಳನ್ನು ಅರ್ಹರ ಮನೆಗಳಿಗೆ ತಲುಪಿಸಲಾಯಿತು.
ಕೊರೊನಾ ವೈರಸ್ ನಿವಾರಣೆಗೆ ಲಾಕ್ ಡೌನ್ ಘೋಷಿಸಿ, ದಿನಬಳಕೆಯ ಸಾಮಗ್ರಿಗಳ ಖರೀದಿಗೆ ಸಮಯ ನಿಗದಿಪಡಿಸಿದ್ದರೂ ಕೂಲಿ ಕೆಲಸವಿಲ್ಲದೇ ದಿನ ಬಳಕೆಯ ಸಾಮಾಗ್ರಿಗಳನ್ನು ಕೊಳ್ಳಲು ಹಣವಿಲ್ಲದೆ ಕಂಗಾಲಾಗಿದ್ದ ಬಡವರಿಗೆ ದಿನಬಳಕೆಯ ವಸ್ತುಗಳನ್ನು ವಿತರಿಸಲಾಯಿತು.

ಮಂಗಳೂರು, ಬೆಂಗಳೂರು ಹಾಗೂ ಗಲ್ಫ್ ದೇಶಗಳಲ್ಲಿ ದುಡಿಯುತ್ತಿರುವ ಮದ್ದಡ್ಕ ಯುವಕರ ಹೆಲ್ಪ್ ಲೈನ್ ವಾಟ್ಸ್ ಆ್ಯಪ್ ಗ್ರೂಪಿನವರು ಈ ಮೊದಲು ಊರಿನಲ್ಲಿ ಕಷ್ಟದಲ್ಲಿರುವ ಬಡ ಹೆಣ್ಣು ಮಕ್ಕಳ ಮದುವೆಗೆ, ಮನೆ ನಿರ್ಮಾಣಕ್ಕೆ ಸಹಾಯ, ಆಸ್ಪತ್ರೆ ಬಿಲ್ ಕಟ್ಟಲಾಗದ ರೋಗಿಗಳ ಖರ್ಚು ಮುಂತಾದ ಕಾರ್ಯಗಳಲ್ಲಿ ತೊಡಗಿದೆ.

ಈಗ ಕೊರೊನಾ ವೈರಸ್ ಭೀತಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದವರಿಗೆ ಈ ಗ್ರೂಪಿನ ಯುವಕರಿಂದ ಪರಿಹಾರ ಕಿಟ್ ಗೆ ಬೇಕಾದ ಮೊತ್ತವನ್ನು ಸಂಗ್ರಹಿಸಲಾಗಿದೆ.
ಅದೇ ರೀತಿ ಇನ್ನೂ ಮುಂದಕ್ಕೂ ಕೂಡಾ ಸಹಾಯ ನೀಡುವ ಭರವಸೆ ನೀಡಿರುತ್ತಾರೆ.

ತುರ್ತು ಸಂದರ್ಭದಲ್ಲಿ ಸಹಾಯ ಬೇಕಾದರೆ ಮದ್ದಡ್ಕ ಹೆಲ್ಪ್ ಲೈನ್ ಗ್ರೂಪಿನ ಸದಸ್ಯರ ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.