ಕಳಿಯ ಗ್ರಾ.ಪಂ.ನಲ್ಲಿ ಕಾರ್ಯಾಪಡೆ ಸಭೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕಳಿಯ ಗ್ರಾ.ಪಂ.ನಲ್ಲಿ ಕಾರ್ಯಾಪಡೆ ಸಭೆ
ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಯಲು ಕಳಿಯ ಗ್ರಾಮ ಪಂಚಾಯತ್‍ನಲ್ಲಿ ಕಾರ್ಯಾಪಡೆಯ ಸಭೆಯು ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯಿತು.

ಎ.4ರಂದು ನಡೆದ ಕಾರ್ಯಾಪಡೆಯ ಸಭೆಯಲ್ಲಿ ಪಡಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಪ್ರತೀತ್ ಅವರು ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡಿದರು. ಕಾರ್ಯಪಡೆಯ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲರು ಮಾಹಿತಿ ನೀಡಿದರು.

ಬೆಳ್ತಂಗಡಿ ಪೊಲೀಸ್ ಠಾಣೆಯ ಎಎಸ್‍ಐ ರಾಮಯ್ಯ ಹೆಗ್ಡೆ , ಸ್ಥಳೀಯ ವೈದ್ಯರಾದ ಡಾ.ಅನಂತ ಭಟ್, ಕಳಿಯ ಗ್ರಾಮದ ಬೀಟ್ ಪೊಲೀಸ್ ಮಾಲತೇಶ್, ನ್ಯಾಯತರ್ಪು ಗ್ರಾಮದ ಬೀಟ್ ಪೊಲೀಸ್ ಮಧು, ಪಂಚಾಯತ್ ಸದಸ್ಯರು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ವರ್ಗದವರು ಇದ್ದರು. ಪಂಚಾಯತ್ ಕಾರ್ಯದರ್ಶಿ ಕುಂಞ.ಕೆ ಧನ್ಯವಾದಗೈದರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.