HomePage_Banner_
HomePage_Banner_
HomePage_Banner_

ಕೆಲಸಗಾರರಿಗೆ ವೇತನ ಕಡಿತಗೊಳಿಸಬೇಡಿ ಉದ್ಯೋಗದಾತರಲ್ಲಿ ಸಿಎಂ ಯಡಿಯೂರಪ್ಪ ಮನವಿ

ಬೆಂಗಳೂರು: ಕೊರೊನಾ ವೈರಸ್ ಹರಡುವುದು ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇರುವುದರಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಮನೆಗೆಲಸದವರು, ಸಹಾಯಕರು ಹಾಗೂ ವಾಹನ ಚಾಲಕರಿಗೆ ಮಾಲೀಕರು ವೇತನ ಕಡಿತ ಮಾಡಬಾರದು. ಸಂಕಷ್ಟದ ಈ ಸಮಯದಲ್ಲಿ ಸಹಾನುಭೂತಿಯಿಂದ ನೆರವಾಗಲು ಕೋರುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಉದ್ಯೋಗದಾತರಿಗೆ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.

ಕೊರೊನಾ ಸೋಂಕು ಹರಡುವಿಕೆ ಸಂಬಂಧ ವಿಧಿಸಲಾಗಿರುವ ಲಾಕ್‍ಡೌನ್‍ನಿಂದ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದ ಖಾಸಗಿ ನೌಕರರು, ಗುತ್ತಿಗೆ ಕೆಲಸಗಾರರು ಮತ್ತು ಕಾರ್ಮಿಕರನ್ನು ಕೆಲಸದಿಂದ ವಜಾ ಮಾಡದೇ, ಸಂಬಳ ಸಹಿತ ರಜೆ ನೀಡಬೇಕು ಎಂದು ಕೇಂದ್ರ ಕಾರ್ಮಿಕ ಇಲಾಖೆಯು ಎಲ್ಲ ಕಾರ್ಮಿಕ ಸಂಘಟನೆಗಳು ಮತ್ತು ಉದ್ಯಮಗಳ ಮಾಲೀಕರಿಗೆ ಮನವಿ ಮಾಡಿತ್ತು.

ಈ ಹಿಂದೆಯೇ ಈ ಕುರಿತ ಮನವಿ ಪತ್ರವನ್ನು ರಾಜ್ಯ ಸರಕಾರ (ರಾಜ್ಯ ವಾರ್ತೆ) ಟ್ವೀಟ್ ಮಾಡಿತ್ತು. ವಿಶ್ವವೇ ಕೊರೊನಾ ವೈರಸ್ ಸೋಂಕಿನಿಂದ ನಲುಗುತ್ತಿದೆ. ಈ ಸಂದರ್ಭದಲ್ಲಿ ಕೊರೊನಾ ವೈರಸ್ ಅಥವಾ ಲಾಕ್‍ಡೌನ್ ಕಾರಣದಿಂದ ಕಚೇರಿಗೆ ಅಥವಾ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ, ಅಂತಹ ನೌಕರರನ್ನು ಆನ್ ಡ್ಯೂಟಿ ಎಂದು ಪರಿಗಣಿಸಬೇಕು. ಅವರನ್ನು ಕೆಲಸದಿಂದ ವಜಾಗೊಳಿಸದೇ ಇರಲು ಮನವಿ ಮಾಡಲಾಗಿತ್ತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.