ಕೆಪಿಸಿಸಿ ಸಾಮಾಜಿಕ ಜಾಲತಾಣದಿಂದ ಸುಲ್ಕೇರಿಯ ಅರಣ್ಯವಾಸಿಗಳಿಗೆ ಅಗತ್ಯ ಸಾಮಾಗ್ರಿ ಪೂರೈಕೆ

Advt_NewsUnder_1
Advt_NewsUnder_1
Advt_NewsUnder_1

ವೇಣೂರು: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಘೋಷಣೆಯಿಂದ ದಿನನಿತ್ಯಕ್ಕೆ ಬೇಕಾದ ಅಗತ್ಯ ಸಾಮಾಗ್ರಿಗಳು ಇಲ್ಲದೇ ಜೀವನ ಸಾಗಿಸಲು ಕಷ್ಟಪಡುತ್ತಿದ್ದ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಅಟ್ರಿಂಜೆಯ ಅರಣ್ಯವಾಸಿ ಕುಟುಂಬಗಳ ಕಾಲೋನಿಗೆ ಕೆಪಿಸಿಸಿ ಸಾಮಾಜಿಕ ಜಾಲತಾಣ ವಿಭಾಗವು ಅಗತ್ಯ ಸಾಮಾಗ್ರಿಗಳನ್ನು ಒದಗಿಸಿದೆ.

ಅರಣ್ಯ ಪ್ರದೇಶದ ನದಿ ತಟದ ಗುಡಿಸಲಿನಲ್ಲಿ ಬುಟ್ಟಿ ಹೆಣೆದು ವಾಸಿಸುವ 7 ಕೊರಗ ಕುಟುಂಬಗಳಿಗೆ ಅಗತ್ಯ ಸಾಮಾಗ್ರಿಗಳ ವಿತರಿಸಿದರು. ಈ ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವ ವಿಚಾರ ತಿಳಿದು ಸಂಬಂಧಪಟ್ಟ ಇಲಾಖೆಗಳ ಗಮನ ಸೆಳೆಯುವ ಬಗ್ಗೆ ಭರವಸೆ ನೀಡಲಾಯಿತು.


ವಿದೇಶಿ ಉದ್ಯಮಿ ಗೋಕುಲ್‍ದಾಸ್ ಭಟ್‍ರವರ ಸಹಕಾರದೊಂದಿಗೆ ಕುಟುಂಬಗಳಿಗೆ ಅಗತ್ಯ ಬೇಕಾದ ನಿತ್ಯೋಪಯೋಗಿ ವಸ್ತುಗಳನ್ನು ಅವರ ಕಾಲನಿಗೆ ತೆರಳಿ ನೀಡಿದರು.

ತಾಲೂಕು ಸಂಚಾಲಕ, ಸಾಮಾಜಿಕ ಚಿಂತಕ ಅನಿಲ್ ಪೈ ಬಂಗಾಡಿ, ರೋಹಿದಾಸ್ ಪೈ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ದ ಮೈಸೂರು ವಿಭಾಗ ಸಂಘಟನಾ ಸಂಚಾಲಕ ಬಿ.ಕೆ. ವಸಂತ್, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಮಿತಿ ಸದಸ್ಯ ಶೇಖರ್ ಲಾಯಿಲ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.