ಅವಧಿ ಮೀರಿದ ನಂತರ ಪಟ್ರಮೆ ಗ್ರಾಮದಲ್ಲಿ ಅಕ್ಕಿ ವಿತರಣೆಗೆ ಬಂದ ತಂಡ ನಾಗರಿಕರು ತಡೆದು ಪೊಲೀಸರಿಗೆ ಮಾಹಿತಿ, ದಂಡ ವಿಧಿಸಿ ಕ್ರಮ ಕೈಗೊಂಡ ಪೊಲೀಸರು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪಟ್ರಮೆ: ಇಲ್ಲಿನ ಪಟ್ರಮೆ ಭಾಗದಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗಾಗಿ ಅಕ್ಕಿ ಮತ್ತು ಅಗತ್ಯ ಸಾಮಾಗ್ರಿಗಳನ್ನು ವಿತರಿಸಲು ಏ. 3 ರಂದು ಸರಕಾರ ನಿಗದಿಪಡಿಸಿದ 12 ಗಂಟೆಯ ಬಳಿಕ ಬಂದ ತಂಡವೊಂದನ್ನು ಊರವರೇ ತಡೆದು ಪೊಲೀಸರಿಗೆ ಮಾಹಿತಿ ನೀಡಿದ ಘಟನೆ ನಡೆದಿದೆ.


ಮಂಗಳೂರಿನ ಸಾಮಾಜಿಕ ಸೇವಾ ಸಂಘಟನೆಯಾದ ಹಿದಾಯ ಫೌಂಡೇಶನ್ ಇದರ ವತಿಯಿಂದ ನೆಲ್ಯಾಡಿ ಭಾಗದ ನಾಲ್ವು ನಿಯೋಜಿತ ಕಾರ್ಯಕರ್ತರು ಒಟ್ಟು 15 ಕುಟುಂಬಗಳಿಗೆ ನೀಡುವಷ್ಟು ಆಹಾರ ವಸ್ತುಗಳ ಕಿಟ್‌ಅನ್ನು ಪಿಕಪ್ ವಾಹನದಲ್ಲಿ ತಂದು ಪಟ್ರಮೆಯಲ್ಲಿ ವಿತರಿಸುತ್ತಿದ್ದರು.

ಇದಕ್ಕಾಗಿ ಉಪ್ಪಿನಂಗಡಿಯ ಮಳಿಗೆಯಿಂದ ಅವರು ಸಾಮಾಗ್ರಿಗಳನ್ನು ಖರೀದಿಸಿದ್ದರು. 9 ಮುಸ್ಲಿಂ ಕುಟುಂಬಗಳಿಗೆ ವಿತರಿಸಿದ ಬಳಿಕ ಉಳಿದ 6 ಕಿಟ್‌ಗಳನ್ನು ಗ್ರಾ.ಪಂ ಜನಪ್ರತಿನಿಧಿ ಶ್ಯಾಂರಾಜ್ ಅವರ ಮೂಲಕ ಯಾರಿಗಾದರೂ ಅರ್ಹರಿಗೆ ತಲುಪಿಸುವ ಬಗ್ಗೆ ಆ ಬಂದಿದ್ದ ಯುವಕರು ಮಾಹಿತಿ ನೀಡಿದರು. ಈ ಬಗ್ಗೆ ಪಿಡಿಒ ಅವರಿಗೆ ಗಮನಕ್ಕೆ ತರಲಾಗಿತ್ತು ಎಂದು ತಂಡದವರು ಹೇಳಿಕೊಂಡಿದ್ದರೂ ಪಿಡಿಒ ಒಪ್ಪಲು ನಿರಾಕರಿಸಿದರು.


ತಂದಿದ್ದ ಕಿಟ್‌ಗಳಲ್ಲಿ ಪಂಚಾಯತ್ ವ್ಯಾಪ್ತಿಯಲ್ಲಿರುವ ರೇಷನ್ ಕಾರ್ಡ್ ಇಲ್ಲದೇ ಇರುವ ಕುಟುಂಬಗಳಿಗೆ ವಿತರಿಸುವಂತೆ ಕ್ರಮ ವಹಿಸಲು ಅವರ ಜೊತೆ ಶ್ಯಾಂರಾಜ್ ಅವರೂ ಬಂದಿದ್ದರು. ಈ ವೇಳೆ ತಂಡವನ್ನು ಸ್ಥಳೀಯ ನಾಗರಿಕರು ತಡೆದು ತರಾಟೆಗೆ ತೆಗೆದುಕೊಂಡರು. ಈ ವೇಳೆ ವಿತರಣೆಗೆ ಬಂದಿದ್ದ ವ್ಯಕ್ತಿಗಳ ಪೈಕಿ ಓರ್ವ ಊರವರ ಜೊತೆ ಸ್ವಲ್ಪ ಏರುಧ್ವನಿಯಲ್ಲಿ ವ್ಯವಹರಿಸಿ, ನಾವು ಬಡವರಿಗೆ ಕೊಡಲು ಬಂದವರು, ಏನು ಮಾಡುತ್ತೀರಿ ಮಾಡಿ ಎಂದು ಮಾತಿಗೆ ನಿಂತಾಗ ಇನ್ನಷ್ಟು ಕ್ರೋಧಗೊಂಡ ಊರವರು, ನಮ್ಮ ಜಾಗದೊಳಗೆ ಬಂದ ವಾಹನವನ್ನು ಕೊಂಡೋಗಲು ಬಿಡುವುದಿಲ್ಲ. ಹೇಗೆ ಹೋಗುತ್ತೀರಿ ಎಂದು ದಿಗ್ಬಂಧನಕ್ಕೆ ಮುಂದಾದ ಪ್ರಸಂಗವೂ ನಡೆದಿದೆ.

ಶ್ಯಾಂ ರಾಜ್ ಅವರ ಜೊತೆ ಪುರುಷರು ಮತ್ತು ಮಹಿಳೆಯರೂ ಸೇರಿದಂತೆ ಊರಿನವರು ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಶ್ಯಾಂ ರಾಜ್ ಅವರು, ನಾವು ಕರೆದುಕೊಂಡು ಬಂದದ್ದಲ್ಲ, ಅವರಾಗಿಯೇ ಸಹಾಯ ಕೇಳಿದಾಗ ಅರ್ಹರನ್ನು ತೋರಿಸಲಷ್ಟೇ ಬಂದಿದ್ದೇನೆ ಎಂದರು.
ಇಷ್ಟರಲ್ಲೇ ವಿಚಾರ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ತಿಳಿದಂತೆ ಸ್ಥಳಕ್ಕೆ ಸಬ್ ಇನ್ಸ್‌ಪೆಕ್ಟರ್ ಓಡಿಯಪ್ಪ ಗೌಡ ಅವರು ಸ್ಥಳಕ್ಕೆ ಧಾವಿಸಿ ಸೇವಾ ಸಂಸ್ಥೆಯ ಮಾಹಿತಿ ಪಡೆದುಕೊಂಡಿದ್ದಾರೆ.

ಕುಟುಂಬಕ್ಕೆ ವಿತರಣೆ ಮಾಡಿ ಉಳಿಕೆ ಕಿಟ್ಟ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 12 ಗಂಟೆಯ ಸಮಯ ನಿಬಂಧನೆ ಮೀರಿ ಮತ್ತು ಸಂಬಂಧಪಟ್ಟ ತಾಲೂಕಿನಲ್ಲಿ ಸೇವಾ ಚಟುವಟಿಕೆ ಮಾಡುವ ವೇಳೆ ತಹಶಿಲ್ದಾರರಿಂದ ಅನುಮತಿ ಪಡೆಯದೇ ಇರುವ ಬಗ್ಗೆ ಅವರನ್ನು ಪೊಲೀಸ್ ಠಾಣೆಗೆ ಕರೆಸಿ ೨ ಸಾವಿರ ರೂ ದಂಡ ವಿಧಿಸಿ ಕಳಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಕ್ಕಿ ವಿತರಣೆಗೆ ಬಂದವರನ್ನು ಪುತ್ತೂರು ತಾಲೂಕು ಕೌಕ್ರಾಡಿ ನಿವಾಸಿಗಳಾದ ಸಿದ್ದೀಕ್, ಟಿಪ್ಪು ಸುಲ್ತಾನ್, ಅಬ್ದುಲ್ ರಹಿಮಾನ್, ಅಬ್ದುಲ್ ಅಝೀಝ್ ಎಂಬವರಾಗಿದ್ದು ಅವರ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಕ್ರಮ ಜರುಗಿಸಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.