HomePage_Banner_
HomePage_Banner_

ಏರ್ ಇಂಡಿಯಾದಿಂದ ಎ.30ರವರೆಗೆ ಟಿಕೆಟ್ ಬುಕ್ಕಿಂಗ್ ರದ್ದು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನದ ಎಲ್ಲ ಟಿಕೆಟ್ ಬುಕ್ಕಿಂಗ್‍ಗಳನ್ನು ಏರ್ ಇಂಡಿಯಾ ಏಪ್ರಿಲ್ 30ರವರೆಗೆ ರದ್ದುಗೊಳಿಸಿದೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಏ.14ರವರೆಗಿನ ಎಲ್ಲಾ ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ನಿರ್ಬಂಧಿಸಿತ್ತು. ಇದೀಗ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಟಿಕೆಟ್ ಬುಕ್ಕಿಂಗ್ ನಿಷೇಧವನ್ನು ಏ.30ರವರೆಗೂ ವಿಸ್ತರಿಸಿದೆ.

ಈ ಕುರಿತು ಏರ್ ಇಂಡಿಯಾ ವಕ್ತಾರ ಮಾತನಾಡಿ, ಏಪ್ರಿಲ್ 3 ರಿಂದ ಏಪ್ರಿಲ್ 30 ರವರೆಗೂ ಎಲ್ಲ ವಿಮಾನ ಬುಕ್ಕಿಂಗ್ ಗಳನ್ನು ನಿಷೇಧಿಸಲಾಗಿದೆ ಎಂದು ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇ 1ರಿಂದ ವಿಮಾನಯಾನ ಟಿಕೆಟ್‍ಗಳನ್ನು ಬುಕ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಭಾರತದ ಇತರೆ ವಾಯುಯಾನ ಸಂಸ್ಥೆಗಳಾದ ಇಂಡಿಗೋ, ಸ್ಪೇಸ್‍ಜೆಟ್, ಮತ್ತು ಗೋ ಏರ್ ಸಂಸ್ಥೆಗಳು ಏಪ್ರಿಲ್ 15ರಿಂದಲೇ ಏರ್ ಟಿಕೆಟ್‍ಗಳನ್ನು ಬುಕ್ ಮಾಡಿಕೊಳ್ಳಲು ಮುಂದಾಗಿವೆ. ಏಪ್ರಿಲ್ 14ರಂದು ಲಾಕ್‍ಡೌನ್ ಅವಧಿ ಮುಗಿಯಲಿದ್ದು, ಕೊರೊನಾ ಸೋಂಕಿನ ಪರಿಸ್ಥಿತಿಗೆ ಅನುಗುಣವಾಗಿ ವಾಯುಯಾನ ಆರಂಭಗೊಳ್ಳಲಿದೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.