HomePage_Banner_
HomePage_Banner_
HomePage_Banner_

ಏ.5ರಂದು ರಾತ್ರಿ 9ಗಂಟೆಗೆ ದೇಶವಾಸಿಗಳು ದೀಪ ಬೆಳಗಿಸಿ ವಿಡಿಯೋ ಸಂದೇಶದಲ್ಲಿ ಜನರಿಗೆ ಪ್ರಧಾನಿ ಮೋದಿ ಕರೆ

ನವದೆಹಲಿ: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಏ.5ರಂದು (ಭಾನುವಾರ) ರಾತ್ರಿ 9ಗಂಟೆಗೆ ಮನೆಯ ಎಲ್ಲ ಲೈಟ್‍ಗಳನ್ನು ಆರಿಸಿ ಮನೆಯ ಎದುರು, ಬಾಲ್ಕನಿಗೆ ಬಂದು ದೀಪ, ಮೊಂಬತ್ತಿ ಅಥವಾ ಮೊಬೈಲ್ ಫ್ಲ್ಯಾಶ್‍ಲೈಟ್ ಬೆಳಗಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದ್ದಾರೆ. 

ಪ್ರಧಾನಿಯವರು ಎ.3ರಂದು ಬೆಳಗ್ಗೆ 9ಗಂಟೆಗೆ ದೇಶವನ್ನುದ್ದೇಶಿಸಿ ವಿಡಿಯೋ ಸಂದೇಶ ನೀಡಿ ನಾವು ಈ ದೀಪ ಬೆಳಗಿಸುವ ಮೂಲಕ ದೀಪದ ಬೆಳಕಿನ ಶಕ್ತಿಯನ್ನು ತೋರಿಸಬೇಕು. ಕೊರೊನಾ ವಿರುದ್ಧ ಹೋರಾಡಲು ಇದು ರಾಮಬಾಣವಾಗಿದೆ. ಇದರಿಂದ 130 ಕೋಟಿ ಭಾರತೀಯರ ಶಕ್ತಿಯನ್ನು ಹೊಸ ಎತ್ತರಕ್ಕೆ ಏರಿಸಬೇಕಿದೆ. ಕೊರೊನಾ ಸೃಷ್ಟಿಸಿದ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಲು ಎ.5ರಂದು ಮನೆಯ ಎಲ್ಲ ಲೈಟ್ ಆರಿಸಿ 9 ನಿಮಿಷಗಳ ಕಾಲ ದೀಪ, ಮೊಂಬತ್ತಿ, ಮೊಬೈಲ್ ಫ್ಲ್ಯಾಶ್‍ಲೈಟ್ ಬೆಳಗಿಸಿ ಆದರೆ ಈ ಸಮಯದಲ್ಲಿ ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮರೆಯಬೇಡಿ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.