ಬೆಳ್ತಂಗಡಿ ತಾಲೂಕಿನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ರಚನೆ ಜಿಲ್ಲಾಧಿಕಾರಿಯವರಿಂದ ಆದೇಶ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ದ.ಕ ಜಿಲ್ಲೆಯ ಕೆಲವೊಂದು ಭಾಗಗಳಲ್ಲಿ ಕೊರೊನಾ ವೈರಾಣು( ಕೊವಿಡ್-19) ಕಂಡು ಬಂದ ಹಿನ್ನಲೆಯಲ್ಲಿ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಡಳಿತದಿಂದ ಸಾಕಷ್ಟು ಮುಂಜಾಗ್ರತಾ ಕಾರ್ಯಕ್ರಮಗಳನ್ನು ವಹಿಸಿದೆ.

ಸಾರ್ವಜನಿಕ ಅನಾವಶ್ಯಕ ಚಲನವಲನಗಳ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಈ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗೂ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಸಾರ್ವಜನಿಕ ಹಿತಾಸಕ್ತಿಗೆ ಕಾರ್ಯ ನಿರ್ವಹಿಸಲು ಬೆಳ್ತಂಗಡಿ ತಾಲೂಕಿನಲ್ಲಿ ಫ್ಲೈಯಿಂಗ್ ಸ್ಕ್ವಾಡ್ ರಚಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿ:
ರಂಜಿತ್‍ಕುಮಾರ್ ಟಿ.ಎಂ ಕೃಷಿ ಇಲಾಖೆ ಬೆಳ್ತಂಗಡಿ.( 7795458763), ಮಂಜುನಾಥ್ ವನ್ಯಜೀವಿ ಅರಣ್ಯಾಧಿ
ಕಾರಿಗಳು(9980808650), ಹೇಮಚಂದ್ರ ಸಮಾಜ ಕಲ್ಯಾಣ ಇಲಾಖೆ ಬೆಳ್ತಂಗಡಿ(9900443682), ಓರ್ವ
ಪೊಲೀಸ್ ಸಿಬಂದಿ.
ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿ:
ಸುಬ್ಬಯ್ಯ ನಾಯ್ಕ ಅರಣ್ಯ ಇಲಾಖೆ ಬೆಳ್ತಂಗಡಿ( 9448729606), ಸುಬ್ರಹ್ಮಣ್ಯ ಆಚಾರ್ ವನ್ಯಜೀವಿ ಅರಣ್ಯಾಧಿ
ಕಾರಿಗಳು ಬೆಳ್ತಂಗಡಿ( 9980808650), ಓರ್ವ ಪೊಲೀಸ್ ಸಿಬಂದಿ.
ವೇಣೂರು ಪೊಲೀಸ್ ಠಾಣಾ ವ್ಯಾಪ್ತಿ:
ಎಸ್.ಆರ್ ನಾಯಕ್ ಹಿಂದುಳಿದ ವರ್ಗಗಳ ಇಲಾಖೆ ಬೆಳ್ತಂಗಡಿ( 9448034775), ಪ್ರಶಾಂತ್ ಪೈ ಅರಣ್ಯ ಇಲಾಖೆ ವೇಣೂರು( 9620426901), ಎಸ್. ರವೀಂದ್ರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬೆಳ್ತಂಗಡಿ( 9731855581), ಹಾಗೂ ಓರ್ವ ಪೊಲೀಸ್ ಸಿಬಂದಿ.
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿ: ಲೋಕೇಶ್ ವಾಣಿಜ್ಯ ತೆರಿಗೆ ಇಲಾಖೆ ಬೆಳ್ತಂಗಡಿ( 7019409984), ರತ್ನಾಕರ ಮಲ್ಯ ಪಶು ಸಂಗೋಪನಾ ಇಲಾಖೆ ಬೆಳ್ತಂಗಡಿ( 9448688552) ಹಾಗೂ ಓರ್ವ ಪೊಲೀಸ್ ಸಿಬಂದಿ.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿ: ಲಕ್ಷ್ಮಣ ಶೆಟ್ಟಿ ಶಿಕ್ಷಣ ಇಲಾಖೆ ಬೆಳ್ತಂಗಡಿ( 940695157), ಶಿವಪ್ರಸಾದ್ ಅಜಿಲ ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ(9448153223), ಚೆನ್ನಪ್ಪ ಮೊೈಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ( 9448983231) ಹಾಗೂ ಓರ್ವ ಪೊಲೀಸ್ ಸಿಬಂದಿ. ಸಾರ್ವಜನಿಕರು ತಮ್ಮ ಠಾಣಾ ವ್ಯಾಪ್ತಿಯ ಯಾವುದೇ ಸಮಸ್ಯೆಗಳಿಗೆ ಈ ಅಧಿಕಾರಿಗಳನ್ನು ಸಂಪರ್ಕಿಸಬಹುದು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.