ನ್ಯೂಸ್ ಪ್ರಿಂಟ್ ಆಮದು ಶುಲ್ಕ ರದ್ದು ಮಾಡಿ: 2 ವರ್ಷಗಳ ತೆರಿಗೆಗೆ ರಜೆ ನೀಡುವಂತೆಯೂ ಕೋರಿಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಐಎನ್‌ಎಸ್ ಪತ್ರ ಮುಖೇನ ಒತ್ತಾಯ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊರೊನಾದಿಂದಾಗಿ ಭಾರತೀಯ ಪತ್ರಿಕಾ ಕ್ಷೇತ್ರವು ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಹೀಗಾಗಿ, ನ್ಯೂಸ್ ಪ್ರಿಂಟ್ ಮೇಲೆ ವಿಧಿಸಲಾಗುವ ಎಲ್ಲ ಆಮದು ಶುಲ್ಕವನ್ನು ರದ್ದು ಮಾಡಬೇಕು, ಎರಡು ವರ್ಷಗಳ ತೆರಿಗೆ ರಜೆ ನೀಡಬೇಕು ಎಂದು ಕೋರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಇಂಡಿಯನ್ ನ್ಯೂಸ್ ಪೇಪರ್ ಸೊಸೈಟಿ ಪತ್ರ ಬರೆದಿದೆ.

ಸದ್ಯಕ್ಕೆ ಪತ್ರಿಕಾ ವಲಯವು ಮೂರು ರೀತಿಯ ಸಂಕಷ್ಟಕ್ಕೆ ಒಳಗಾಗಿದೆ. ಒಂದೆಡೆ ಕೊರೊನಾ ವೈರಸ್ ದಾಳಿ, ಮತ್ತೊಂದೆಡೆ ಜಾಹೀರಾತಿನಲ್ಲಿ ಗಣನೀಯ ಇಳಿಕೆ ಮತ್ತು ನ್ಯೂಸ್ ಪ್ರಿಂಟ್ ಮೇಲಿನ ಕಸ್ಟಮ್ಸ್ ಶುಲ್ಕವು ಪತ್ರಿಕಾ ರಂಗವನ್ನು ಊಹಿಸಲಾಗದಷ್ಟು ಬಿಕ್ಕಟ್ಟಿಗೆ ಸಿಲುಕಿದೆ. ಸ್ಥಳೀಯ ಪತ್ರಿಕೆಗಳಂತೂ ಅಲ್ಪಾವಧಿಯಲ್ಲೇ ಸಂಪೂರ್ಣ ಪತನಗೊಳ್ಳುವ ಸ್ಥಿತಿಗೆ ತಲುಪಿವೆ. ದೇಶಾದ್ಯಂತ ಲಾಕ್ ಡೌನ್‌ನಿಂದಾಗಿ ಪತ್ರಿಕೆ ಪ್ರಸರಣವು ಕುಸಿದಿದೆ. ಜತೆಗೆ, ಜಾಹೀರಾತು ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವ ಕಾರಣ ಪತ್ರಿಕೆಗೆ ಅತ್ಯಗತ್ಯವಾದ ಆದಾಯದ ಮೂಲವೇ ಇಲ್ಲದಂತಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಕಳೆದ ವರ್ಷ ನ್ಯೂಸ್ ಪ್ರಿಂಟ್ ಮೇಲೆ ಶೇ.10 ಆಮದು ಶುಲ್ಕ ವಿಧಿಸಿದ್ದರಿಂದ ಒಟ್ಟು ಕಸ್ಟಮ್ಸ್ ಶುಲ್ಕ ಶೇ.15ಕ್ಕೇರಿತು. ಪ್ರಸಕ್ತ ವರ್ಷ, ಕೇಂದ್ರ ಬಜೆಟ್‌ನಲ್ಲಿ ಶೇ.10ರ ಶುಲ್ಕವನ್ನು ತೆಗೆದು ಹಾಕಲಾಗಿದೆಯಾದರೂ. ಪತ್ರಿಕೆಗಳು ಈಗಲೂ ಶೇ.5 ಶುಲ್ಕ ಪಾವತಿಸಲೇಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯನ್ನು ಮನಗಂಡು ಈ ಶುಲ್ಕವನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು ಎಂದೂ ವಿತ್ತ ಸಚಿವರಿಗೆ ಮಾಡಿದ ಮನವಿಯಲ್ಲಿ ಕೋರಲಾಗಿದೆ.

ಎಂಥ ಪ್ರತಿಕೂಲ ಸನ್ನಿವೇಶದಲ್ಲೂ ಮಾಧ್ಯಮಗಳ ಜವಾಬ್ದಾರಿ ಮಹತ್ವದ್ದಾಗಿರುತ್ತದೆ. ಅಂತೆಯೇ, ಕೊರೊನಾದಂಥ ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲೂ ನಮ್ಮೆಲ್ಲ ಪತ್ರಿಕೆಗಳೂ ಕರ್ತವ್ಯ ನಿಷ್ಠೆ ಮೆರೆಯುತ್ತಿವೆ. ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುವವರು ತಮ್ಮ ಜೀವನವನ್ನೇ ಪಣಕಿಟ್ಟು ಸಾರ್ವಜನಿಕರಿಗೆ ನೈಜ ಸುದ್ದಿಗಳನ್ನು ತಲುಪಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದೂ ಪತ್ರದಲ್ಲಿ ವಿವರಿಸಲಾಗಿದೆ.

ಇದೇ ವೇಳೆ ಕಳೆದ ವರ್ಷ ಡಿಎನ್‌ಎ ಮತ್ತು ಫೈನಾನ್ಶಿಯಲ್ ಕ್ರೋನಿಕಲ್‌ನಂಥ ಆಂಗ್ಲ ಪತ್ರಿಕೆಗಳು ತಮ್ಮ ಮುದ್ರಣ ಆವೃತ್ತಿಯನ್ನು ಸ್ಥಗಿತಗೊಳಿಸಿರುವುದು ಮತ್ತು ಮುಂಬಯಿನ ಆಫ್ಟರ್‌ನೂನ್ ಡಿಸ್ಪಾಚ್ ಮತ್ತು ಕೊರಿಯರ್ ಪತ್ರಿಕೆಗಳು ಸಂಪೂರ್ಣವಾಗಿ ಮುದ್ರಣ ನಿಲ್ಲಿಸಿರುವ ಕುರಿತೂ ಪತದಲ್ಲಿ ಉಲ್ಲೇಖಿಸಿದ್ದು ಈ ಕ್ಷೇತ್ರದ ಬಿಕ್ಕಟ್ಟಿನ ಕುರಿತು ಗಮನ ಸೆಳೆಯಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.