ಜೌಷಧಿಯ ಕೊರತೆ ಉಂಟಾಗದಂತೆ ವ್ಯವಸ್ಥೆ

ಬೆಳ್ತಂಗಡಿ: ಕೊರೊನಾ ಸೋಂಕಿನಿಂದ ಜನತೆ ತತ್ತರಿಸಿ ಹೋಗಿದ್ದು, ತಾಲೂಕು ಆಡಳಿತ, ಆರೋಗ್ಯ ಇಲಾಖೆ, ಸೇರಿದಂತೆ ಎಲ್ಲಾ ಇಲಾಖೆಯವರು ಜನರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಸೂಕ್ತವಾದ ಕ್ರಮಗಳನ್ನುಮಾಡುತ್ತಿದ್ದಾರೆ. ಸರಕಾರದ ಸೂಚನೆಗಳನ್ನು ಚಾಚು ತಪ್ಪದೆ ಮಾಡುತ್ತಿದ್ದಾರೆ.

ತಾಲೂಕಿನ 55 ಜೌಷಧಿ ಅಂಗಡಿ ಮಾಲಕರು ಜೌಷಧಿಯನ್ನು ತರಿಸಿಕೊಂಡು ತಾಲೂಕಿನ ಜನತೆಗೆ ಜೌಷಧಿಯ ಕೊರತೆ ಬಾರದ ಹಾಗೆ ನಾವು ಸಂಘದ ವತಿಯಿಂದ ನೋಡಿಕೊಳ್ಳುತ್ತಿದ್ದೇವೆ ಎಂದು ತಾಲೂಕು ಜೌಷಧಿ ವ್ಯಾಪರಸ್ಥರ ಸಂಘದ ಅಧ್ಯಕ್ಷ ಜಗದೀಶ್ ಡಿ. ತಿಳಿಸಿದ್ದಾರೆ.

ತಾಲೂಕಿನಲ್ಲಿ ಸ್ವಲ್ಪ ಜೌಷಧಿಯ ಕೊರತೆ ಕಂಡು ಬಂದಿದೆ. ನಮಗೆ ಮಂಗಳೂರಿನಿಂದ ಜೌಷಧಿ ಪೂರೈಕೆಯಾಗಬೇಕು, ಆದರೆ ಅಲ್ಲಿಯ ಹೋಲ್‍ಸೇಲ್ ಅಂಗಡಿಯ ನೌಕರರು ದೂರದ ಊರಿನವರಾಗಿದ್ದರಿಂದ ಅವರು ಇಲ್ಲದೆ ಪೂರೈಕೆಗೆ ಬಳಷ್ಟು ತೊಂದರೆಯಾಗಿದೆ. ಕೆಲವೇ ದಿನಗಳಲ್ಲಿ ಇದು ಸರಿಯಾಗಿ ತಾಲೂಕಿನಲ್ಲಿ ಜೌಷಧಿಯ ಕೊರತೆ ಬಾರದ ಹಾಗೆ ವ್ಯವಸ್ಥೆ ಮಾಡುತ್ತಿದ್ದೇವೆ. ತಾಲೂಕಿನ ಜನತೆ ಸರಕಾರ ಸೂಚಿಸಿದ ಮಾರ್ಗದರ್ಶನ, ನಿಯಮಗಳನ್ನು ಪಾಲಿಸಿ ಈ ಸೋಂಕು ತಡೆಗೆ ಪೂರ್ಣ ಸಹಕಾರ ನೀಡುವಂತೆ ಅವರು ಸಲಹೆ ನೀಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.