ಬೆಳ್ತಂಗಡಿ ರೋಟರಿ ಕ್ಲಬ್‍ನಿಂದ ತಾಲೂಕು ಆಸ್ಪತ್ರೆಗೆ ಪಿ.ಪಿ ಕಿಟ್, ಮಾಸ್ಕ್ ಗಳ ವಿತರಣೆ

  • ವೈದ್ಯಕೀಯ ಪರಿಕರಗಳ ಹಸ್ತಾಂತರಿಸಿದ ಶಾಸಕ ಹರೀಶ್ ಪೂಂಜಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ತಾಲೂಕು ಆಸ್ಪತ್ರೆಗೆ ಪಿ.ಪಿ.ಕಿಟ್ (ಪರ್ಸ್‍ನಲ್ ಪ್ರೊಟೆಕ್ಷನ್ ಕಿಟ್), ಮಾಸ್ಕ್ ಹಾಗೂ ಇತರ ಪರಿಕರಗಳನ್ನು ಹಸ್ತಾಂತರಿಸಲಾಯಿತು.

ಬೆಳ್ತಂಗಡಿ ಸರಕಾರಿ ತಾಲೂಕು ಆಸ್ಪತ್ರೆಯಲ್ಲಿ ಎ.1ರಂದು ನಡೆದ ವೈದ್ಯಕೀಯ ಪರಿಕರ ವಿತರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ರೋಟರಿ ಕ್ಲಬ್‍ನವರು ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ರೋಟರಿ ಕ್ಲಬ್‍ನ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.


ರೋಟರಿ ಕ್ಲಬ್ ಅಧ್ಯಕ್ಷ ನಿಯೋಜಿತ ಅಧ್ಯಕ್ಷ ರೋ.ಧನಂಜಯ ರಾವ್ ಮಾತನಾಡಿ ರೋಟರಿ ಕ್ಲಬ್ ಸದಸ್ಯರ ಸಹಕಾರದಿಂದ ಸುಮಾರು 75 ಸಾವಿರ ರೂ. ಮೌಲ್ಯದ 50 ಪಿ.ಪಿ.ಕಿಟ್ ಮತ್ತು ಮಾಸ್ಕ್‍ನ್ನು ತಾಲೂಕು ಆಸ್ಪತ್ರೆಗೆ ಹಸ್ತಾಂತರಿಸಿದ್ದು, ಅಲ್ಲದೇ ಆಶಾ ಕಾರ್ಯಕರ್ತೆಯರಿಗೆ ತಲಾ 50 ಮಾಸ್ಕ್‍ಗಳನ್ನು ಒದಗಿಸಲಾಗುವುದು ಎಂದರು.


ಬೆಳ್ತಂಗಡಿ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿದ್ಯಾವತಿ ಅವರು ಮಾತನಾಡಿ ಆಸ್ಪತ್ರೆಗೆ ಅಗತ್ಯವಿರುವ ವೈದ್ಯಕೀಯ ಪರಿಕರಗಳನ್ನು ಒದಗಿಸಿದ ರೋಟರಿ ಕ್ಲಬ್‍ಗೆ ಅದಕ್ಕಾಗಿ ಸಹಕರಿಸಿದ ಶಾಸಕರಾದ ಹರೀಶ್ ಪೂಂಜರಿಗೆ ಕೃತಜ್ಞತೆಗಳನ್ನು ಹೇಳಿದರು.
ಇದೇ ಸಂದರ್ಭದಲ್ಲಿ ಮಾಸ್ಕ್‍ಗಳನ್ನು ಉಚಿತವಾಗಿ ಹೊಲಿಸಿ ಕೊಟ್ಟಿರುವ ಟೈಲರ್ ರಮೇಶ್ ಬಂಗೇರ ಕೃತಜ್ಞತೆ ಅರ್ಪಿಸಲಾಯಿತು.

ರೋಟರಿ ಕ್ಲಬ್ ಅಧ್ಯಕ್ಷ ರೋ.ಜಯರಾಮ್ ಎಸ್., ನಿಯೋಜಿತ ಕಾರ್ಯದರ್ಶಿ ಶ್ರೀಧರ ರಾವ್, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರೋ. ಪೀತಾಂಬರ ಹೇರಾಜೆ, ರೋ.ಡಾ.ಚಂದ್ರಕಾಂತ್, ರೋ.ಮನೋರಮಾ ಭಟ್, ಡಾ.ದೀಪಾಲಿ ಡೋಂಗ್ರೆ, ರಾಜಶ್ರೀ ರಾವ್, ಡಾ.ಶಶಿಧರ್ ಡೋಂಗ್ರೆ, ಡಾ.ಸುಷ್ಮಾ ಡೋಂಗ್ರೆ, ಮತ್ತು ಆಸ್ಪತ್ರೆ ಸಿಬ್ಬಂದಿ ವರ್ಗದವರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.