ಕೊರೊನಾ ಕೊರೈಂಟಿನ್; ಪೊಲೀಸ್ ಕರ್ತವ್ಯಕ್ಕೆ ಅಡ್ಡಿ ; ಪ್ರಕರಣ ದಾಖಲು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ; ಮಾರಕ ಸಾಂಕ್ರಾಮಿಕ ಕೊರೊನಾ ಸೋಂಕು ಹರಡದಂತೆ ತಡೆಯುವರೇ ದೇಶಾದ್ಯಂತ ಸರಕಾರವು ಜಾರಿಗೆ ತಂದಿರುವ ಲಾಕ್ ಡೌನ್ ನಂತೆ ಇತ್ತೀಚೆಗೆ ವಿದೇಶದಿಂದ ಊರಿಗೆ ಬಂದು ಹೋಮ್ ಕ್ವಾರೆಂಟೈನ್ ನಿಗಾದಲ್ಲಿರುವ ವ್ಯಕ್ತಿಗಳನ್ನು ಚೆಕ್‌ ಮಾಡಲು ಕರ್ತವ್ಯಕ್ಕೆ ನೇಮಿಸಿದ ಬೆಳ್ತಂಗಡಿ ಪೊಲೀಸು ಠಾಣಾ ಸಿಬ್ಬಂದಿಗಳಾದ ಗಂಗಾದರ್‌ , ಮಹಿಳಾ ಪೊಲೀಸ್ ಸಿಬ್ಬಂದಿ ಚೈತ್ರಾ ಹಾಗೂ ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಎಎನ್‌ಎಂ ಕಮಲ ಅವರೊಂದಿಗೆ ಬೆಳ್ತಂಗಡಿ ತಾಲೂಕು ನ್ಯಾಯತರ್ಪು ಗ್ರಾಮದ ನಾಳ ದೇವಸ್ಥಾನದ ಹತ್ತಿರ ವಾಸವಿರುವ Home Quarantineನಲ್ಲಿರುವ ವ್ಯಕ್ತಿ ಹಂಝತ್‌ ಅಲಿ ಎಂಬವರ ಮನೆಗೆ ಹೋಗಿದ್ದಾಗ ಅವರು ಸರಕಾರಿ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗುದೆ.

ಕ್ವಾರೆಂಟೈನ್ ನಲ್ಲಿದ್ದ ಹಂಝತ್ ಅಲಿ ಅವರ ಮನೆಗೆ ಹೋಗಿ ಪರಿಶೀಲಿಸಿದಾಗ ಅವರು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಮನೆಯ ಅಂಗಳದಲ್ಲಿ ಓಡಾಡುತ್ತಿದ್ದುದನ್ನು ಗಮನಿಸಿ ಅವರಿಗೆ ಸುರಕ್ಷತಾ ಕ್ರಮವನ್ನು ಪಾಲಿಸುವಂತೆ ತಿಳಿಸಿದಾಗ ಹಂಝತ್‌ ಅಲಿ ಹಾಗೂ ಅವರ ಮನೆಯಲ್ಲಿದ್ದ ಮಸೂದ್ ಆಲಿ, ಬಾತೀಷ್ ಆಲಿ‌ ಮತ್ತು ಅಕ್ಬರ್ ಅಲಿ ಎಂಬವರು, ಅಪಾಯಕಾರಿ ರೋಗದ ಸೋಂಕನ್ನು ಹರಡುವ ಸಂಭವ ಇರುವ ಕೃತ್ಯವನ್ನು ನಿರ್ಲಕ್ಷ್ಯದಿಂದ ಹಾಗೂ ದ್ವೇಷಪೂರ್ವಕವಾಗಿ ಮಾಡಿ ನಮ್ಮ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯವಾಗಿ ನಿಂದಿಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ದೂರು‌ ನೀಡಿದ ಹಿನ್ನೆಲೆಯಲ್ಲಿ ಆರೋಪಿತರ ವಿರುದ್ಧ ಪೊಲೀಸ್ ಕೇಸು ಹಾಕಲಾಗಿದೆ.

ಆರೋಪಿಗಳು ಇದೀಗ ಐಪಿಸಿ ಸೆಕ್ಷನ್ 269, 270, 353 504 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ಎದುರಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.