ಶಿಶಿಲೇಶ್ವರ ದೇವರ ಮೀನುಗಳಿಗೆ ಆಹಾರದ ಕೊರತೆ ನಾಲ್ಕು ಚೀಲ ಅರಳು ಸಮರ್ಪಿಸಿದ ಶಾಸಕ ಹರೀಶ್ ಪೂಂಜ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ವೈರಸ್ ಹರಡದಂತೆ ತಡೆಯಲು ಸರಕಾರ ಲಾಕ್‍ಡೌನ್‍ಗೆ ಆದೇಶಿಸಿದ್ದರಿಂದ ಮತ್ಸ್ಯತೀರ್ಥವೆಂದು ಖ್ಯಾತಿ ಪಡೆದಿರುವ ಶಿಶಿಲದ ಶ್ರೀಶಿಶಿಲೇಶ್ವರ ದೇವಸ್ಥಾನದ ದೇವರ ಮೀನುಗಳು ಪ್ರವಾಸಿಗರು ಇಲ್ಲದೇ ಮೀನುಗಳಿಗೆ ಆಹಾರದ ಕೊರತೆಯಾಗಿದೆ.


ಸರಕಾರದ ಆದೇಶದಂತೆ ದೇವಸ್ಥಾನಕ್ಕೆ ಭಕ್ತರು ಹಾಗೂ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವಿದೆ ಹೀಗಾಗಿ ಅಲ್ಲಿರುವ ದೇವರ ಮೀನುಗಳು ಸಂಕಷ್ಟಕ್ಕೆ ಸಿಲುಕಿದ್ದವು. ಇದನ್ನು ಅರಿತ ಶಾಸಕ ಹರೀಶ್ ಪೂಂಜ ಅವರು ಮೀನುಗಳಿಗೆ 4 ಚೀಲ ಅರಳು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ.

ಮೀನುಗಳಿಗೆ ಮಾ.31ರಂದು ಆಹಾರ ಸಮರ್ಪಿಸುವಾಗ ದೇಶಕ್ಕೆ ಒದಗಿದ ಆರೋಗ್ಯ ಸಂಕಷ್ಟವನ್ನು ನಿವಾರಿಸುವಂತೆ ದೇವರಲ್ಲಿ ಸಾಮೂಹಿಕವಾಗಿ ಪ್ರಾರ್ಥಿಸಲಾಯಿತು.

ಆಡಳಿತ ಮಂಡಳಿ ಮನವಿ:
ದೇವರ ಮೀನುಗಳಿಗೆ ಆಹಾರವನ್ನು ನೀಡಲು ಇಚ್ಛಿಸುವ ಮತ್ಸ್ಯಪ್ರೇಮಿಗಳು ಹಾಗೂ ಆಸಕ್ತರು ಶಕ್ತಿಯಾನುಸಾರ ಅರಳು ಅಥವಾ ಅಕ್ಕಿಯನ್ನು ದೇವಾಲಯದ ಮಂಡಳಿಗೆ ಒಪ್ಪಿಸಲು ಅವಕಾಶವಿದೆ. ಆಹಾರ ಸಮರ್ಪಿಸುವವರು ಪ್ರತಿದಿನಕ್ಕೊಬ್ಬರಂತೆ ಆಗಮಿಸಿ ಮಂಡಳಿಗೆ ತಲುಪಿಸಬಹುದು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.