HomePage_Banner_
HomePage_Banner_
HomePage_Banner_

ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ಸ್ಯಾನಿಟೈಸರ್ ಸಿಂಪಡಣೆ ಕೊರೊನಾ ವೈರಸ್ ಹರಡದಂತೆ ಸ್ವಚ್ಛತೆ

ಬೆಳ್ತಂಗಡಿ: ಬಾರ್ ಅಸೋಸಿಯೇಷನ್ ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ಸ್ವಾಮಿ ಪ್ರಸಾದ್ ಕನ್‍ಸ್ಟ್ರಕ್ಷನ್ ಇಳಂತಿಲ ಅವರ ಸಹಯೋಗದಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ತಾಲೂಕಿನ ಕೋರ್ಟ್ ಆವರಣದಲ್ಲಿ ಸ್ಯಾನಿಟೈಸರ್ ಸಿಂಪಡಿಸಿದರು.


ಮಾ.31ರಂದು ತಾಲೂಕಿನ ನ್ಯಾಯಾಲಯದ ಆವರಣದಲ್ಲಿ 12 ಸಾವಿರ ಲೀ. ಸಾಮಥ್ರ್ಯದ ಟ್ಯಾಂಕರ್‍ನಲ್ಲಿ ತಂದ ಸ್ಯಾನಿಟೈಸರ್‍ನ್ನು ನ್ಯಾಯಾಲಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಂಪಡಿಸಲಾಯಿತು. ಕೋರ್ಟ್ ಆವರಣವು ಪ್ರತಿನಿತ್ಯ ಸಾವಿರಾರು ಮಂದಿ ಓಡಾಡುವ ಪ್ರದೇಶವಾದ್ದರಿಂದ ಇಲ್ಲಿ ಹೆಚ್ಚಿನ ಸ್ವಚ್ಛತೆಯ ಅಗತ್ಯವಿದೆ. ನ್ಯಾಯಾಧೀಶರು, ವಕೀಲರು, ಪೊಲೀಸರು ಹಾಗೂ ಸಾರ್ವಜನಿಕರು ಓಡಾಟ ನಡೆಸುವುದರಿಂದ ಹೆಚ್ಚಿನ ಮುಂಜಾಗ್ರತೆ ಅವಶ್ಯವಿದೆ.


ಕೋರ್ಟ್ ಆವರಣದ ಸ್ಯಾನಿಟೈಸರ್ ಸಿಂಪಡಣೆಯಲ್ಲಿ ಬೆಳ್ತಂಗಡಿ ನ್ಯಾಯಾಧೀಶರಾದ ಆನಂದ್, ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಲೋಬೋ, ರೋಟರಿ ಕ್ಲಬ್ ಅಧ್ಯಕ್ಷ ವಿಜಯ್‍ರಾಮ್, ನಿಯೋಜಿತ ಅಧ್ಯಕ್ಷ ಬಿ.ಕೆ.ಧನಂಜಯ ರಾವ್, ವಕೀಲರಾದ ದಿನೇಶ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.