ಎಲ್ಲರೂ ಮಾಸ್ಕ್ ಹಾಕಬೇಕಾಗಿಲ್ಲ : ಆರೋಗ್ಯ ಇಲಾಖೆ ಆಯುಕ್ತರ ಸ್ಪಷ್ಟನೆ * ಕೊರೊನಾ ಲಕ್ಷಣಗಳಿದ್ದರೆ ಮಾಸ್ಕ್ ಧರಿಸಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದಿನಸಿ ಅಂಗಡಿಗಳಲ್ಲಿ, ಮಾರುಕಟ್ಟೆಗಳಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಪ್ರವೇಶಕ್ಕೆ ನಿರಾಕರಿಸುವುದನ್ನು ಕಂಡು ಬಂದ ಹಿನ್ನೆಲೆಯಲ್ಲಿ ಎಲ್ಲರೂ ಮಾಸ್ಕ್ (ಮುಖಗವಸು) ಧರಿಸಬೇಕಾದ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.


ಈ ಬಗ್ಗೆ ಮಾ.31ರಂದು ಮಾರ್ಗಸೂಚಿ ಬಿಡುಗಡೆ ಮಾಡಿರುವ ಆರೋಗ್ಯ ಇಲಾಖೆ ಆಯುಕ್ತರು, ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಎನ್ನುವ ನಿಯಮವಿಲ್ಲ. ಈ ಮೊದಲು ರಾಜ್ಯ ಸರಕಾರವು ಹಲವು ಸುತ್ತೋಲೆ, ಸೂಚನೆ ಮೂಲಕ ಯಾರು ಮಾಸ್ಕ್ ಧರಿಸಬೇಕು ಎಂಬ ಮಾಹಿತಿ ಜನರಿಗೆ ನೀಡಲಾಗಿತ್ತು.
ವ್ಯಕ್ತಿಗೆ ಶೀತ, ಕೆಮ್ಮು, ಜ್ವರ, ಉಸಿರಾಟದ ತೊಂದರೆ ಇದ್ದರೆ ಮಾಸ್ಕ್ ಹಾಕುವ ಅಗತ್ಯವಿದೆ. ಶಂಕಿತ ಕೊರೊನಾ ರೋಗಿ ಅಥವಾ ದೃಢಪಟ್ಟ ಕೊರೊನಾ ರೋಗಿಯ ನಿಗಾವಹಿಸುತ್ತಿರುವ ಸಂದರ್ಭದಲ್ಲಿ ಹಾಗೂ ಉಸಿರಾಟದ ತೊಂದರೆ ಇರುವ ರೋಗಿಯ ಚಿಕಿತ್ಸೆಯ ವೇಳೆಯಲ್ಲಿ ವೈದ್ಯಕೀಯ ಸಿಬ್ಬಂದಿ ಮಾಸ್ಕ್ ಧರಿಸಬೇಕು ಎಂದು ಇಲಾಖೆ ಸೂಚಿಸಿದೆ.

ಯಾವ ಮಾದರಿ ಮಾಸ್ಕ್ ಬಳಕೆ?
ಕೊರೊನಾ ಶಂಕಿತರು ಅಥವಾ ಸೋಂಕು ದೃಢಪಟ್ಟವರು ಹಾಗೂ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಕೊಂಡಿರುವವರು, ನಿಗಾವಹಿಸುವವರು ಎನ್-95 ಮಾಸ್ಕ್ ಧರಿಸಬೇಕು. ಉಳಿದವರು ಮೂರು ಪದರಗಳ ಸರ್ಜಿಕಲ್ ಮಾಸ್ಕ್ ಹಾಕಿದರೆ ಸಾಕು ಎಂದು ಆರೋಗ್ಯ ಇಲಾಖೆ ಆಯುಕ್ತರು ತಿಳಿಸಿದ್ದಾರೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.