HomePage_Banner_
HomePage_Banner_
HomePage_Banner_

ನೆರಿಯ ಗ್ರಾ.ಪಂ.: ನೆರಿಯ, ಬೈಲಂಗಡಿ ಬಸದಿ ಬಳಿ ಬ್ಯಾರಿಕೇಡ್ ಹಾಕಿ ಗ್ರಾಮಕ್ಕೆ ಹೊರಗಿನವರ ನಿರ್ಬಂಧ

ನೆರಿಯ: ಕೊರೊನಾ ವೈರಸ್ ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯಪಡೆ ರಚಿಸಿ ಬೈಲಂಗಡಿ ಬಸದಿ(ಪೆರಿಯಡ್ಕ ತಿರುವಿನಲ್ಲಿ) ಹಾಗೂ ನೆರಿಯಾ ಜುಮ್ಮಾ ಮಸೀದಿ ಬಳಿಯಲ್ಲಿ ಬ್ಯಾರಿಕೇಡ್ ಹಾಕಿ ಗ್ರಾಮಕ್ಕೆ ಹೊರಗಿನವರು ಬಾರದಂತೆ ನಿರ್ಬಂಧಿಸಲಾಗಿದೆ. 

ನೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷ ಪಿ.ಮಹಮ್ಮದ್ ಅವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಿ ಗ್ರಾಮಕ್ಕೆ ಹೊರಗಿನವರ ಪ್ರವೇಶವಾಗದಂತೆ ಈನೆರಿಯ ಗ್ರಾ.ಪಂ.: ನೆರಿಯ, ಬೈಲಂಗಡಿ ಬಸದಿ ಬಳಿ ಬ್ಯಾರಿಕೇಡ್ ಹಾಕಿ ಗ್ರಾಮಕ್ಕೆ ಹೊರಗಿನವರ ನಿರ್ಬಂಧ ತಂಡ ಹಗಲು, ರಾತ್ರಿ ನಿರ್ವಹಿಸುತ್ತಿದೆ. ಗ್ರಾಮದಿಂದ ತುರ್ತು ಅಗತ್ಯ ವಾಹನಗಳು, ಸರಕಾರಿ ವಾಹನಗಳು, ಅವಶ್ಯಕ ವಸ್ತು ಸಾಗಾಟ ವಾಹನಗಳ ಹೊರತುಪಡಿಸಿ ಇತರ ವಾಹನಗಳಿಗೆ ನಿರ್ಬಂಧ ವಿಧಿಸಿದೆ.

ಅಗತ್ಯ ವಸ್ತುಗಳ ಖರೀದಿಗೆ ಜನರು ಮನೆಯಿಂದ ಹೊರ ಬಾರದಂತೆ ಮಾಡಲು ಮನೆ ಮನೆಗೆ ಅಗತ್ಯ ಸಾಮಾಗ್ರಿಗಳನ್ನು ತಲುಪಿಸಲು ಗುರುತಿನ ಚೀಟಿ ನೀಡಿ ಹೋಂ ಡೆಲಿವರಿ ಬಾಯ್ಸ್ ಎಂಬ ಕಾರ್ಯಕರ್ತರ ತಂಡ ರಚಿಸಲಾಗಿದೆ.
ಇದೇ ರೀತಿಯಾಗಿ ಎಲ್ಲ ಗ್ರಾಮ ಪಂಚಾಯತ್‍ಗಳಲ್ಲಿ ರಚಿಸಿರುವ ಕಾರ್ಯಪಡೆಯು ಜನರಲ್ಲಿ ಜಾಗೃತಿ ಮೂಡಿಸಿದರೆ ಕೊರೊನಾ ವೈರಸ್ ಹರಡುವುದು ತಡೆಯಬಹುದು ಎಂದು ನೆರಿಯ ಪಂಚಾಯತ್ ಅಧ್ಯಕ್ಷ ಪಿ.ಮಹಮ್ಮದ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಕ್ಕಿಂಜೆಯಿಂದ ಕಾಯರ್ತಡ್ಕ ಕಡೆಯ ಮಾರ್ಗದ ನೆರಿಯಾ ಜುಮ್ಮ ಮಸೀದಿ ಹಾಗೂ ಬೈಲಂಗಡಿ ಬಸದಿ ಬಳಿ ಬ್ಯಾರಿಕೇಡ್ ಹಾಕಿ ಗ್ರಾ.ಪಂ. ಅಧ್ಯಕ್ಷ ಪಿ.ಮಹಮ್ಮದ್, ಪಂಚಾಯತ್ ಸದಸ್ಯರಾದ ಪಿ.ಕೆ.ರಾಜನ್, ಬಾಬುಗೌಡ ಪರ್ಪಳ, ಕಂದಾಯ ಇಲಾಖೆಯ ಗ್ರಾಮ ಸಹಾಯಕರಾದ ವಿ.ಹರೀಶ್, ಶ್ರೀನಿವಾಸ, ಪಂಚಾಯತ್ ಸಿಬ್ಬಂದಿ ಗಿರೀಶ್ ಮುಂತಾದವರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.