HomePage_Banner_
HomePage_Banner_
HomePage_Banner_

ಟೈಲರ್ ರಮೇಶ್ ಬಂಗೇರರಿಂದ ಮಾಸ್ಕ್ಉಚಿತ ವಿತರಣೆ

ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಆದೇಶವನ್ನು ಲಾಯಿಲ ಗ್ರಾಮದ ಅಂಕಾಜೆಯ ಟೈಲರ್ ರಮೇಶ್ ಬಂಗೇರ ಅವರು ಮನೆಯಲ್ಲಿದ್ದು, ಸದುಪಯೋಗಿಸಿಕೊಂಡಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಕೊರೊನಾ ವೈರಸ್ ತಡೆಗಟ್ಟಲು ಮತ್ತೊಬ್ಬರಿಗೆ ಹರಡದಂತೆ ತಡೆಯಲು ಹೊಸ ಬಟ್ಟೆಯಲ್ಲಿ ಮಾಸ್ಕ್ ಗಳನ್ನು ತಯಾರಿಸಿ, ಸುತ್ತಮುತ್ತಲಿನ ಪ್ರದೇಶದವರಿಗೆ ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುತ್ತಿದ್ದಾರೆ.

ಈಗಾಗಲೇ ನೂರಕ್ಕೂ ಹೆಚ್ಚು ಮಾಸ್ಕ್ ಗಳನ್ನು ವಿತರಿಸಿದ್ದಾರೆ. ಇದೇ ರೀತಿ ತಾಲೂಕಿನ ಎಲ್ಲಾ ಟೈಲರ್ ಗಳು ತಮ್ಮ, ತಮ್ಮ ಮನೆಯಲ್ಲಿ ಮಾಸ್ಕ್ ಅನ್ನು ತಯಾರಿಸಿ ನೆರೆಹೊರೆಯವರಿಗೆ ವಿತರಿಸಿದರೆ, ಕೊರೊನಾ ತಡೆಗಟ್ಟಲು ತಮ್ಮ

ಸೇವೆಯೂ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.