HomePage_Banner_
HomePage_Banner_

ಕೇರಳ ಗಡಿ ಸಂಪರ್ಕ ರಸ್ತೆ ಬಂದ್ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ ಕೇರಳ ಸಂಸದ

ಕೊರೊನಾ ರೋಗ ಭೀತಿಯ ಹಿನ್ನೆಲೆಯಲ್ಲಿ ಕೇರಳ ರಾಜ್ಯಕ್ಕೆ ಕರ್ನಾಟಕದಿಂದ ಸಂಪರ್ಕ ಸಾಧಿಸುವ ರಸ್ತೆಗಳ ಗಡಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದ್ದು ಈ ಕ್ರಮವನ್ನು ಪ್ರಶ್ನಿಸಿ ಕಾಸರಗೋಡು ಸಂಸದ ರಾಜ್‌ಮೋಹನ್ ಉನ್ನಿತ್ತಾನ್ ಅವರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ಕರ್ನಾಟಕ ರಾಜ್ಯ ಸರಕಾರದ ಈ ಕ್ರಮಕ್ಕೆ ತಡೆಯಾಜ್ಞೆ ನೀಡುವಂತೆ ಅವರು ಪರಮೋಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಕೇರಳದ ಗಡಿ ಪ್ರದೇಶವಾದ ನಮ್ಮ ಕಡೆಯಿಂದ ರೋಗಿಗಳನ್ನು ತುರ್ತು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಸಾಗಿಸಬೇಕಾಗಿದೆ. ಡಯಾಲಿಸಿಸ್ ಚಿಕಿತ್ಸೆಗೂ ಮಂಗಳೂರು ಆಸ್ಪತ್ರೆಗಳಿಗೆ ಹೋಗುವವರಿದ್ದಾರೆ. ಇವರನ್ನು ಸಾಗಿಸುವ ಆಂಬುಲೆನ್ಸ್ ವಾಹನಕ್ಕೂ ಪ್ರವೇಶ ನಿರಾಕರಿಸಿರುವುದರಿಂದ ನಿನ್ನೆ ತಾನೆ ಓರ್ವೆ ಮಹಿಳೆ ಸಾವನ್ನಪ್ಪುವಂತಾಗಿದೆ ಎಂದು ಅವರು ಮನವಿಯಲ್ಲಿ ಗಮನಸೆಳೆದಿದ್ದಾರೆ. ಇದಲ್ಲದೆ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೂ ಕೂಡ ಈ ಬಗ್ಗೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆದು, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.