ಕೊಕ್ಕಡ ಸ್ವಾಭಿಮಾನಿ ಗೆಳೆಯರ ಬಳಗದಿಂದ ಬಡವರಿಗೆ ದಿನಬಳಕೆ ವಸ್ತು ವಿತರಣೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕೊಕ್ಕಡ: ಕೊರೊನಾ ವೈರಸ್ ಹರಡದಂತೆ ತಡೆಯಲು ಲಾಕ್‍ಡೌನ್ ಆದೇಶದಿಂದ ಕೊಕ್ಕಡ ಗ್ರಾಮದಲ್ಲಿ ತೊಂದರೆಗೊಳಗಾದ ದಿನಗೂಲಿ ನೌಕರರು ಹಾಗೂ ಬಡವರಿಗೆ ದಿನಬಳಕೆಯ ವಸ್ತುಗಳನ್ನು ಸ್ವಾಭಿಮಾನಿ ಗೆಳೆಯರ ಬಳಗದಿಂದ ವಿತರಿಸಲಾಯಿತು.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೆಲಸವಿಲ್ಲದ್ದರಿಂದ ದಿನಗೂಲಿ ನೌಕರರು, ಬಡವರು ದಿನಬಳಕೆಯ ವಸ್ತುಗಳನ್ನು ದೈನಂದಿನ ಸಂಪಾದನೆ ಇಲ್ಲದ್ದರಿಂದ ಖರೀದಿಸಲು ಆಗುತ್ತಿಲ್ಲ. ಇದರಿಂದ ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ ಕೊಕ್ಕಡದ ಸ್ವಾಭಿಮಾನಿ ಗೆಳೆಯರ ಬಳಗವು ಪ್ರತಿ ವಾರ್ಡಿನಲ್ಲಿ ಸಂಕಷ್ಟಕ್ಕೆ ಸಿಲುಕಿದವರ ಗುರುತಿಸಿ ದಿನಬಳಕೆಯ ವಸ್ತುಗಳನ್ನು ವಿತರಿಸಿದರು. ಅಧಿಕಾರಿಗಳು ಅನುಮತಿ ನೀಡಿದಲ್ಲಿ ಸಂಕಷ್ಟಕ್ಕೆ ಒಳಗಾದವರಿಗೆ ನೆರವು ನೀಡಲು ಸಿದ್ಧ ಎಂದು ಸ್ವಾಭಿಮಾನಿ ಗೆಳೆಯರ ಬಳಗದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಟಿ.ಎಂ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೊಕ್ಕಡ ಸ್ವಾಭಿಮಾನಿ ಗೆಳೆಯರ ಬಳಗದ ಅಧ್ಯಕ್ಷ ದಯನೀಶ್, ಕಾರ್ಯದರ್ಶಿ ಲಕ್ಷ್ಮೀನಾರಾಯಣ ಟಿ.ಎಂ, ಸಿರಿಲ್ ಡಿಸೋಜಾ, ಮಹಾಬಲ ನಾಯ್ಕ್, ಲಕ್ಷ್ಮೀನಾರಾಯಣ ಶಬರಾಯ, ರುಕ್ಮಯ ಮಡಿವಾಳ್, ಸೀತಮ್ಮ, ಭಾಸ್ಕರ ಶೆಟ್ಟಿಗಾರ್, ಚರಣ್, ರಹೀಂ ಮಲ್ಲಿಗೆ, ಸುಂದರ ಪೂಜಾರಿ, ಚಂದ್ರಶೇಖರ್ ಅಟೋ ಮಾಲಕರು, ಇ.ಕೆ ಇಬ್ರಾಹಿಂ, ಉಮ್ಮರ್ ಬೈಲಂಗಡ , ಉಮೇಶ್  ಸಪ್ತಗಿರಿ  ಮೊದಲಾದವರು ವಿತರಣಾ ಕಾರ್ಯದಲ್ಲಿ ಪಾಲ್ಗೊಂಡರು.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.