HomePage_Banner_
HomePage_Banner_
HomePage_Banner_

ಅಗತ್ಯ ವಸ್ತುಗಳನ್ನು ಮನೆಗಳಿಗೆ ಪೂರೈಸಲು ಬಳಂಜ ಗ್ರಾಮ ಪಂಚಾಯತಿ ಸಜ್ಜು

ಬಳಂಜ: ಕೊರೊನಾ ವೈರಸ್ ನಿಂದ ದೇಶಾದ್ಯಂತ ಸೇರಿ ಜಿಲ್ಲೆಯಲ್ಲಿಯೂ ಕಟ್ಟುನಿಟ್ಟಿನ ಲಾಕ್ ಡೌನ್ ನಿಂದ ಅಗತ್ಯ ವಸ್ತುಗಳಿಗೆ ಮನೆಯಿಂದ ಹೊರಬರಲು ಸಾಧ್ಯವಿಲ್ಲದ್ದರಿಂದ ಮನೆಗಳಿಗೆ ಅಗತ್ಯವಾದ ವಸ್ತುಗಳನ್ನು ತಲುಪಿಸುವ ಕುರಿತಾಗಿ ಸಭೆಯನ್ನು ಮಾ.30 ರಂದು ಬಳಂಜ ಗ್ರಾಮ ಪಂಚಾಯತನಲ್ಲಿ ಹಮ್ಮಿಕೊಳ್ಳಲಾಯಿತು.

ಸಭೆಯಲ್ಲಿ ಬಳಂಜ,ನಾಲ್ಕೂರು, ತೆಂಕಕಾರಂದೂರಿನ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿ ಸ್ವಯಂ ಸೇವಕ ರಾಗಿ ಮನೆಗಳಿಗೆ ವಸ್ತುಗಳನ್ನು ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಮಣಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ದೇವಕಿ ಕೊರಗಪ್ಪ, ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾರ್ಯದರ್ಶಿ ಪ್ರಿಯಾ ಡಿ ಹೆಗ್ಡೆ, ಸದಸ್ಯರಾದ ವಿಕ್ಟರ್ ಕ್ರಾಸ್ತಾ, ಯಶೋಧರ ಶೆಟ್ಟಿ, ಹೇಮಂತ್,ಗುರುಪ್ರಸಾದ್ ಹೆಗ್ಡೆ ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.