ಬದುಕು ಕಟ್ಟೋಣ ಬನ್ನಿ‌ ತಂಡದಿಂದ ಉಜಿರೆ ಪಟ್ಟಣದಲ್ಲಿ ಸೇನಿಟೈಸರ್ ಸಿಂಪಡಣೆ ಆರಂಭ.

ಉಜಿರೆ.; ಮಾರಕ‌ ಕೊರೊನಾ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನ ಪ್ರಮುಖ ಪ್ರದೇಶಗಳಲ್ಲಿ ಸೇನಿಟೈಸರ್ ಸಿಂಪಡಣೆ ಮಾಡುವ ಕಾರ್ಯ ಉಜಿರೆ ನಗರದಿಂದ ಇಂದು ಮಾ .30 ರಂದು ಆರಂಭವಾಯಿತು.

ಬದುಕು ಕಟ್ಟೋಣ ಬನ್ನಿ ತಂಡದ ಮುಖ್ಯಸ್ಥ, ಉಜಿರೆ ಲಕ್ಷ್ಮೀ ಗ್ರೂಪ್ಸ್ ಮಾಲಕ ಮೋಹನ್ ಕುಮಾರ್‌,‌ ಇನ್ನೋರ್ವ ಮುಖ್ಯಸ್ಥ, ಉಜಿರೆ ಸಂಧ್ಯಾ ಟ್ರೇಡರ್ಸ್ ಮಾಲಕ‌ ರಾಜೇಶ್ ಪೈ ಇವರ ನೇತ್ರತ್ವದಲ್ಲಿ ಈ‌ಕಾರ್ಯ ಆರಂಭವಾಗಿದ್ದು, ಶಾಸಕ ಹರೀಶ್ ಪೂಂಜ, ಸ್ವತಃ ತಾವೇ ಸಿಂಪಡಣೆ ಮಾಡುವ ಮೂಲಕ ಚಾಲನೆ ನೀಡಿದರು.

ಈ‌ ಸಂದರ್ಭದಲ್ಲಿ ಉಜಿರೆ ಗ್ರಾ.ಪಂ ಅಧ್ಯಕ್ಷ ಶ್ರೀಧರ ಪೂಜಾರಿ, ಪಿಡಿಒ‌ ಪ್ರಕಾಶ ಶೆಟ್ಟಿ ನೊಚ್ಚ, ಪ್ರಮುಖರಾದ ರಾಮಚಂದ್ರ ಶೆಟ್ಟಿ, ರವಿ ಚಕ್ಕಿತ್ತಾಯ, ರವಿ‌ಕುಮಾರ್ ಬರಮೇಲು, ಇಲ್ಯಾಸ್ ಮಾಚಾರ್, ತಿಮ್ಮಯ್ಯ ನಾಯ್ಕ, ಜಯರಾಮ‌ ಗೌಡ, ಗೋಪಾಲಕೃಷ್ಣ ಗೌಡ ಜಿ.ಕೆ, ಅರ್ಚನಾ ರಾಜೇಶ್ ಪೈ, ರಾಧಾಕೃಷ್ಣ ಪೈ‌ ಗೇರುಕಟ್ಟೆ‌‌ ಮೊದಲಾದವರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.