ಮುನ್ನೆಚ್ಚರಿಕಾ ಸೂಚನೆ ಧಿಕ್ಕರಿಸಿದ ಆರೋಪ: ಕರಾಯದ ಸೋಂಕಿತ ವ್ತಕ್ತಿ ಮೇಲೆ ಪ್ರಕರಣ ದಾಖಲು

Advt_NewsUnder_1
Advt_NewsUnder_1

ಣ್ಣೀರುಪಂತ: ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ಕೊಟ್ಟಿದ್ದರೂ ಅದನ್ನು‌ಮೀರಿ‌ ಸಿಕ್ಕ ಸಿಕ್ಕಲ್ಲೆಲ್ಲಾ ಓಡಾಡಿ, ಇದೀಗ ಅದೇ ವ್ಯಕ್ತಿಗೆ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕರಾಯದ ವ್ಯಕ್ತಿಯ‌ ವಿರುದ್ಧ 

ಭಾರತೀಯ ದಂಡ ಸಂಹಿತೆ 269, 270, 271ರಡಿ ಪ್ರಕರಣ ದಾಖಲಾಗಿದೆ.

ಸದ್ರಿ‌ ವ್ಯಕ್ತಿಯ‌ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಇದೀಗ್‌ ಅವರ ವಿರುದ್ಧ ಕೇಸು ದಾಖಲಾಗಿದೆ.

ಸದ್ರಿ‌ ವ್ಯಕ್ತಿಯು ಮಾ.21ರಂದು ದುಬೈನಿಂದ ಬೆಂಗಳೂರಿಗೆ ಬಂದಿದ್ದರು. ಅಲ್ಲಿ ಅವರನ್ನು ಪರೀಕ್ಷೆಗೊಳಪಡಿಸಿ ಸ್ಟಾಂಪಿಂಗ್ ಹಾಕಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಲು ಸೂಚನೆ ನೀಡಲಾಗಿತ್ತು. ಆದರೆ ವ್ಯಕ್ತಿ ಯು ಸೂಚನೆಯನ್ನು ಧಿಕ್ಕರಿಸಿ ಮನೆಯವರಿಗೆ ಹಾಗೂ ನೆರೆಕರೆಯಲ್ಲಿ ತಿರುಗಾಡಿ, ಅಲ್ಲಿಯೂ ಕೊರೊನಾ ಹರಡುವಂತೆ ಮಾಡಿದ್ದಾರೆ. ಆದ್ದರಿಂದ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸಿ ಯವರು ದೂರಿನಲ್ಲಿ ತಿಳಿಸಿದ್ದರು.
ಇದೀಗ ಉಪ್ಪಿನಂಗಡಿ‌ ಪೊಲೀಸ್ ಠಾಣೆಯಲ್ಲಿ ಕೇಸು ಆಗಿದೆ. ‌

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.