ಇಂದು (ಮಾ.30) ಸಂಜೆಯಿಂದಲೇ ಹಾಲು ಖರೀದಿ ಆರಂಭ

Advt_NewsUnder_1
Advt_NewsUnder_1

ಬೆಂಗಳೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ಮಾ.28 ಸಂಜೆಯಿಂದ ಸ್ಥಗಿತಗೊಂಡಿದ್ದ ಹಾಲು ಖರೀದಿಯನ್ನು ಮಾರ್ಚ್ 30 ಸಂಜೆಯಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಅನ್ವಯ ಆಗುವಂತೆ ಪುನರಾರಂಭಿಸಲಾಗುವುದು ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಎಂ.ಡಿ ಡಾ. ಜಿ.ವಿ. ಹೆಗ್ಡೆ ತಿಳಿಸಿದ್ದಾರೆ.

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದಂತೆ ಹಾಲು ಖರೀದಿಯನ್ನು ಸ್ಥಗಿತಗೊಳಿಸಿ ಜಿಲ್ಲಾ ಉಸ್ತುವಾರಿ ಸಚಿವರು ಆದೇಶ ಹೊರಡಿಸಿದ್ದರು. ಎರಡು ದಿನಗಳ ಬಳಿಕ ಅಂದರೆ ಮಾರ್ಚ್ 30ರ ಸಂಜೆಯಿಂದ ಹಾಲು ಖರೀದಿ ಮತ್ತೆ ಆರಂಭಗೊಳ್ಳಲಿದೆ. ಮಾರ್ಚ್ 31ರಿಂದ ಹಾಲು ಖರೀದಿ ಆರಂಭಗೊಳ್ಳಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಗ್ರಾಹಕರಿಂದ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.

“ಪ್ರತಿದಿನ ಒಂದು ಲಕ್ಷ ಲೀಟರ್‌ಗೂ ಹೆಚ್ಚು ಹಾಲಿನ ಬೇಡಿಕೆ ಇದೆ. ಅಲ್ಲದೇ ಹಾಲು ದಿನಬಳಕೆಯ ಅವಶ್ಯಕ ವಸ್ತು ಆಗಿರುವುದರಿಂದ, ಪೊಲೀಸರು ಹಾಲು ಮಾರಾಟಕ್ಕೆ ಅವಕಾಶ ನೀಡಿದ್ದಾರೆ. ಆದ್ದರಿಂದ ಹಾಲು ಉತ್ಪಾದಕರ ಸಹಕಾರಿ ಸಂಘಗಳಿಂದ ಹಾಲು ಖರೀದಿಯನ್ನು ಮತ್ತೆ ಆರಂಭಿಸಲಾಗುವುದು” ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಆಡಳಿತ ನಿರ್ದೇಶಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.