ಕೊರೊನಾ ಬಗ್ಗೆ ತಾಲೂಕಿನ ಜನಾಭಿಪ್ರಾಯ

ಬಡವರಿಗೆ ಅವಶ್ಯಕ ವಸ್ತುಗಳ ವಿತರಣೆ
ಕೊರೊನಾ ವೈರಸ್‍ನಿಂದ ನಮಗೆ ಮುಕ್ತಿ ಸಿಗಬೇಕಾದರೆ ನಾವು ಮನೆಯಿಂದ ಹೊರಗೆ ಬರದೇ ಇರುವುದೇ ಉತ್ತಮ ವಿದೇಶದಿಂದ ಬಂದವರಿದ್ದರೆ ಹತ್ತಿರದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಿಳಿಸಬೇಕು. ಅವರನ್ನು ಹೋಮ್ ಕ್ವಾರಂಟೈನ್‍ನಲ್ಲಿಟ್ಟು ನಿಗಾವಹಿಸಿ ಅವರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೊಲೀಸ್ ಹಾಗೂ ಜನಸ್ನೇಹಿ ವಾಟ್ಸ್ಯಾಪ್ ಗ್ರೂಪ್‍ನ ಮುಖಾಂತರ ಬಡವರಿಗೆ ಸಹಾಯ ಹಾಗೂ ಅವರ ಮನೆಗೆ ಅಕ್ಕಿ ಹಾಗೂ ಇನ್ನಿತರ ದಿನಚರಿ ವಸ್ತುಗಳನ್ನು ನೀಡಲು ನಿರ್ಧರಿಸಲಾಗಿದೆ. ಗ್ರೂಪ್‍ನ ಮುಖಾಂತರ ಮನೆ ಮನೆಗೆ ಹೋಗಿ ಜನರಿಗೆ ಸಾಮಾಗ್ರಿಗಳನ್ನು ವಿತರಿಸಲಾಗುವುದು.

ಬಡವರು ಇದ್ದರೆ ಸಂಪರ್ಕಿಸಿ: 9164717795
– ವಿನೂಷ ಪ್ರಕಾಶ್
ತಾಲೂಕು ಪಂಚಾಯತ್ ಸದಸ್ಯರು (ಅಳದಂಗಡಿ ಕ್ಷೇತ್ರ)

 

ಸರ್ಕಾರದ ಆದೇಶ ಪಾಲಿಸಿ ಮನೆಯಲ್ಲೇ ಇರಿ

ಕೊರೊನಾ ವೈರಸ್ ವ್ಯಾಪಕವಾಗಿ ಹರಡಿ ಭಾರತದಲ್ಲಿ ತಡೆಗಟ್ಟಲು 21 ದಿನಗಳ ಲಾಕ್ ಡೌನ್ ಅನಿವಾರ್ಯ. ದೇಶದ ಜನರ ಹಿತದೃಷ್ಟಿಯಿಂದ ಸರ್ಕಾರದ ನಿಲುವು ಉತ್ತಮವಾಗಿದ್ದು, ನಾವು ಮನೆಯಲ್ಲಿದ್ದು ಪಾಲಿಸಬೇಕಾಗಿದೆ. ಕೊರೊನಾ ವೈರಸ್ ಬಗ್ಗೆ ಜಾಗೃತಿ ಇರಬೇಕು ಆದರೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡದೇ ಖಚಿತ ಸುದ್ದಿಗಾಗಿ ಪತ್ರಿಕೆ, ದೃಶ್ಯ ಮಾಧ್ಯಮವನ್ನು ಬಳಸಿ‌.
ಎಲ್ಲ ಪ್ರಜೆಗಳು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಕಾನೂನು ಕೈಗೆತ್ತಿಕೊಳ್ಳಬೇಡಿ ಯಾವುದೇ ಸಮಸ್ಯೆ ಬಂದರು ಸಹಾಯವಾಣಿಗೆ ಕರೆ ಮಾಡಿ.

✍️ ನಿಶಾನ್ ಬಂಗೇರ ನಾರ್ಯ,

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.