ಭಕ್ತರ ಪ್ರವೇಶ ನಿಷೇಧ ಹಿನ್ನೆಲೆ ಶಿಶಿಲ‌ ದೇವರ ಮೀನುಗಳು ಆಹಾರದ ಕೊರತೆಯಿಂದ ಸಂಕಷ್ಟದಲ್ಲಿ

ಶಿಶಿಲ: ಕೊರೋನಾ ಲಾಕ್ ಡೌನ್ ನಿಂದಾಗಿ ಮತ್ಸ್ಯ ತೀರ್ಥವೆಂದೇ ಪ್ರಖ್ಯಾತಿ ಪಡೆದಿರುವ ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಶಿಶಿಲ ಶ್ರೀ ಶಿಶಿಲೆಶ್ವರ ಸನ್ನಿಧಾನ ಭಕ್ತರಿಗೆ ದರ್ಶನಕ್ಕೆ ತೆರೆದಿರದ ಕಾರಣ, ದೇವಸ್ಥಾನಕ್ಕೆ ತಾಗಿಕೊಂಡಿರುವ ಕಪಿಲಾ ನದಿಯ ಸಾವಿರಾರು ದೇವರ ಮೀನುಗಳು ಆಹಾರಕ್ಕಾಗಿ ಪರಿತಪಿಸುವ ಸಂದರ್ಭ ಉಂಟಾಗಿದೆ.

ದಿನ ನಿತ್ಯ ಭಕ್ತರಲ್ಲದೆ ಸಾವಿರಾರು ಪ್ರವಾಸಿಗರು ಬಂದು ಅಕ್ಕಿ , ಅರಳುಗಳನ್ನು ಮೀನುಗಳಿಗೆ ಅರ್ಪಿಸುತ್ತಿದ್ದರು.
ಇದೀಗ ಮೀನುಗಳಿಗೆ ಆಹಾರದ ಮೂಲವಾಗಿದ್ದ ಪ್ರವಾಸಿಗರು ಮತ್ತು ಭಕ್ತಾದಿಗಳಿಲ್ಲದೆ ದೇವಸ್ಥಾನ ಭುಣುಗುಟ್ಟುತ್ತಿದೆ.

ಭಕ್ತರು ಹಾಕುತ್ತಿದ್ದ ಕಾಳುಗಳನ್ನು ತಿಂದು ಆಟವಾಡುತ್ತಾ, ಎತ್ತರಕ್ಕೆ ನೆಗೆಯುತ್ತಾ ಸಂತೋಷಗೊಳ್ಳುತ್ತಿದ್ದ‌‌‌ ದೇವರ ಮೀನುಗಳು ನಿಶ್ಯಬ್ದವಾಗಿದೆ.
ಈ‌ಬಗ್ಗೆ ಮತ್ಸ್ಯ ಹಿತರಕ್ಷಣಾ ಸಮಿತಿಯ ಅದ್ಯಕ್ಷ ಜಯರಾಮ ನೆಲ್ಲಿತ್ತಾಯ‌ ಆತಂಕ‌ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಗೆ ಸಂಬಂಧಿತ ಕ್ಷೇತ್ರವಾಗಿರುವ ಶಿಶಿಲ ಕ್ಷೇತ್ರಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ತಕ್ಷಣವೇ ಈ ಬಗ್ಗೆ ಗಮನ ಹರಿಸಿದರೆ ಅಳಿವಿನಂಚಿನಲ್ಲಿರುವ ಮತ್ಸ್ಯ ಸಂಕುಲದ ಉಳಿವಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದಂತಾಗುತ್ತದೆ ಎಂಬುದು ಭಕ್ತರ ಅನಿಸಿಕೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.