ಮಸ್ಜಿದ್ ಧ್ವನಿ ವರ್ಧಕದ ಮೂಲಕ ದಿನಕ್ಕೆ 4 ಬಾರಿ ಕೊರೊನಾ ಜಾಗೃತಿ ವಾಯ್ಸ್ ಕ್ಲಿಪ್*

Advt_NewsUnder_1
Advt_NewsUnder_1
Advt_NewsUnder_1

ಕೊರೊನಾ ಮಾರಕ ವೈರಸ್ ಹರಡುವಿಕೆ ಕುರಿತಂತೆ ಸರಕಾರದಿಂದ ಹಾಗೂ ಅಮೀರ್ ಎ ಶರೀಅತ್ ಅವರು ನೀಡಿರುವ ನಿರ್ದೇಶನಗಳಂತೆ ಈಗಾಗಲೇ ರಾಜ್ಯ ವಕ್ಫ್ ಮಂಡಳಿ ಅಧಿಕಾರಿಗಳು ತ್ರಿಭಾಷಾ ವಾಯ್ಸ್ ಕ್ಲಿಪ್ ರಚಿಸಿ ಸಾಮಾಜಿಕ ಜಾಲತಾಣಗಳ ಮೂಲಕ ರವಾನಿಸಿದ್ದು, ಇದನ್ನು ರಾಜ್ಯದ ಎಲ್ಲಾ ಮಸ್ಜಿದ್‌ಗಳಲ್ಲಿ ದಿನಕ್ಕೆ 4 ಬಾರಿ ನಿಗದಿತ ಸಮಯದಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರಪಡಿಸುವಂತೆ ಎಲ್ಲ ಆಡಳಿತ ಮಂಡಳಿಗಳಿಗೆ ಅಧಿಕೃತ ಜ್ಞಾಪನಾ ಪತ್ರದ ಮೂಲಕ ಅದೇಶ ಜಾರಿಗೊಳಿಸಿದೆ.

ಈ ಬಗ್ಗೆ ವಕ್ಫ್ ಮಂಡಳಿಯ ರಾಜ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನೀಡಿದ ಪತ್ರದಲ್ಲಿ, ಎಲ್ಲ ಮಸ್ಜಿದ್‌ಗಳಲ್ಲಿ ಪ್ರತಿದಿನ ಬೆಳಿಗ್ಗೆ 10.00 ಗಂಟೆಗೆ, ಅಪರಾಹ್ನ 4.00 ಗಂಟೆಗೆ, ಸಂಜೆ 6.00 ಗಂಟೆಗೆ ಮತ್ತು ರಾತ್ರಿ 8.00 ಗಂಟೆಗೆ ಹೀಗೆ ದಿನಕ್ಕೆ ಕನಿಷ್ಠ ನಾಲ್ಕು ಬಾರಿ ಈ ಜಾಗೃತಿ ವಾಯ್ಸ್‌ಕ್ಲಿಪ್ ಪ್ರಚಾರ ಮಾಡುವ ಮೂಲಕ ಜನ ಸಮುದಾಯಕ್ಕೆ ಕರೆನೀಡುವಂತೆ ಸೂಚಿಸಿದ್ದಾರೆ.

ಸದ್ರಿ ಆದೇಶದ ಪ್ರತಿಯನ್ನು ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಕಮಿಷನರ್‌ಗಳಿಗೆ, ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ, ಎಲ್ಲಾ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ, ಹಾಗೂ ರಾಜ್ಯದ ಎಲ್ಲಾ ಮಸ್ಜಿದ್ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳಿಗೆ ಪ್ರತಿಯನ್ನು ರವಾನಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.