ಕೊರೊನಾ ಬಗ್ಗೆ ತಾಲೂಕಿನ ಜನರ ಅಭಿಪ್ರಾಯ

ಸ್ವಯಂ ದಿಗ್ಬಂಧನ ನಾಳಿನ ನೆಮ್ಮದಿಯ ಜೀವನಕ್ಕೆ ಕಾರಣ.

ಕೊರೊನಾ ವೈರಸ್ (Covid 19) ಜಗತ್ತಿಗೇ ಬಂದ ಮಹಾ ಮಾರಿ. ಇದರ ತಡೆಗೆ ಸ್ವಯಂ ದಿಗ್ಬಂಧನ ಅತ್ಯವಶ್ಯ. ಜೀವನಾವಶ್ಯಕ ವಸ್ತುಗಳನ್ನು ಒಮ್ಮೆಲೇ ಖರೀದಿಸದೇ, ಜನಜಂಗುಳಿಯಿಂದ ದೂರವಿರುವುದು, ಹೊರಗಡೆ ಹೋಗುವಾಗ ಮಾಸ್ಕ್
ಧರಿಸುವುದು, ಜನರಿಂದ ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯ.

ಮನೆಗೆ ಬಂದು ಕೈ, ಕಾಲು ಮುಖಗಳನ್ನು ಸಾಬೂನಿನಿಂದ ತೊಳೆದು, ಬಟ್ಟೆ ಬರೆ ಬದಲಾಯಿಸುವುದು ಸೂಕ್ತ. ಬಂಧು ಬಳಗ , ಸ್ನೇಹಿತರನ್ನು ದೂರವಾಣಿ ಮೂಲಕವೇ ಸಂಪರ್ಕಿಸಬೇಕು. ಮನೆಯಿಂದ ಹೊರಗೆ ಕಾಲಿಡುವುದೆಂದರೆ ಮಹಾಮಾರಿಯನ್ನು ಮನೆಗೆ ಆಹ್ವಾನಿಸಿದಂತೆ.

ನಾವು ಪಾಲಿಸುವ ಸ್ವಯಂ ದಿಗ್ಬಂಧನ ನಾಳಿನ ನೆಮ್ಮದಿಯ ಜೀವನಕ್ಕೆ ಕಾರಣ. ನಮ್ಮನ್ನು ನಾವು ಸೋಂಕಿನಿಂದ ರಕ್ಷಿಸಿಕೊಂಡರೆ ಇತರರಿಗೆ ನಮ್ಮಿಂದ ಹರಡುವುದು ತಡೆದಂತೆ. ನಮಗಾಗಿ ಹಗಲಿರುಳು ದುಡಿಯುವ ವೈದ್ಯರು, ದಾದಿಯರು, ಆರಕ್ಷಕರು,ಸಮಾಜ ಸೇವಕರ ಸೇವೆಗಳನ್ನು ಸ್ಮರಿಸುತ್ತಾ ಅವರ ಹೊರೆಯನ್ನು ಕಡಿಮೆ ಮಾಡಲು ನಮ್ಮ ಜವಾಬ್ದಾರಿಯನ್ನು ಅರಿತು ಬಾಳೋಣ. ನಾವು ಜಾಗೃತರಾಗಿರುವುದಲ್ಲದೇ ಇತರರನ್ನೂ ಜಾಗೃತರಾಗಿಸೋಣ. ದೇಶದ ನೆಚ್ಚಿನ ಪ್ರಧಾನಮಂತ್ರಿಗಳ ಮನವಿಯನ್ನು ಪಾಲಿಸುವುದರೊಂದಿಗೆ ಮಹಾಮಾರಿಯನ್ನು ದೇಶದಿಂದ ತೊಲಗಿಸೋಣ.

ಶಿವ ಭಟ್,
ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘ ನಿ. ಅಳದಂಗಡಿ

 

 

ಪ್ರಜೆಗಳ ಹಿತರಕ್ಷಣೆಗೆ ಸರಕಾರದ ಕ್ರಮ ಸ್ವಾಗತಾರ್ಹ

ಕೊರೊನಾ ವೈರಸ್ ಈಗಾಗಲೇ ಸಾಕಷ್ಟು ಭಯವನ್ನು ಹುಟ್ಟಿಸಿದೆ ವಿಶ್ವದ ಬಲಿಷ್ಟ ರಾಷ್ಟ್ರಗಳಾದ ಹಾಗೂ ವೈದ್ಯಕೀಯ ಸವಲತ್ತಿನಲ್ಲಿ ಮುಂದುವರಿದ ರಾಷ್ಟ್ರಗಳ ಅಮೆರಿಕಾ, ಚೀನಾ ಇಲ್ಲಿನ ಪ್ರಜೆಗಳೇ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ರಾಷ್ಟ್ರದ ಪ್ರಜೆಗಳ ಹಿತರಕ್ಷಣೆಗೆ ಸರ್ಕಾರ ಕೈಗೊಂಡಿರುವುದನ್ನು ತಪ್ಪದೇ ಪಾಲಿಸಬೇಕು.

ನಮ್ಮ ಹಾಗೂ ನಮ್ಮವರ ಜೀವ ಉಳಿಸೋಣ ಮಾನವ ಕುಲಕ್ಕೆ ಬಂದಿರುವ ವಿಪತ್ತನ್ನು ಪ್ರಜ್ಞಾವಂತ ನಾಗರಿಕರಾದ ನಾವು ಸರಕಾರದೊಂದಿಗೆ ಸೇರಿ ದಿಟ್ಟವಾಗಿ ಎದುರಿಸೋಣ.
ನಮ್ಮ ವಠಾರದಲ್ಲಿ ಜನಗಳಿಗೆ ಕೊರೊನದ ಬಗ್ಗೆ ಹಾಗೂ ಅದಕ್ಕಾಗಿ ಸರಕಾರ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕಾಗಿದೆ.

ಪ್ರವೀಣ್ ಕುಮಾರ್ ಎಚ್. ಎಸ್
ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ, ಬಳಂಜ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.